ಮೊರ್ಬಿ ತೂಗು ಸೇತುವೆ ದುರಂತ: ಕಂಪನಿ ನಿರ್ಲಕ್ಷ್ಯವೇ ಕಾರಣ ಎಂದ ಎಫ್‌ಎಸ್‌ಎಲ್ ತನಿಖೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತಿನ ಮೊರ್ಬಿ ಎಂಬಲ್ಲಿ ನಡೆದ ತೂಗು ಸೇತುವೆ ದುರಂತಕ್ಕೆ ಒರೆವಾ ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂದು ಎಫ್‌ಎಸ್‌ಎಲ್ ತನಿಖೆಯಿಂದ ತಿಳಿದು ಬಂದಿದೆ.

ಸೇತುವೆ ದುರಂತ ನಡೆದ ದಿನದಂದು 3,165 ಟಿಕೆಟ್​ಗಳನ್ನು ಸಾರ್ವಜನಿಕರಿಗೆ ನೀಡಿದ್ದು, ಅಷ್ಟು ತೂಕವನ್ನು ಹೊರುವಷ್ಟು ಸಾಮರ್ಥ್ಯ ಸೇತುವೆಗೆ ಇಲ್ಲದ ಕಾರಣ ದುರಂತ ಸಂಭವಿಸಿದೆ.

ಇನ್ನು ಸೇತುವೆಯ ಸಾಮರ್ಥ್ಯ ಎಂದಿಗೂ ಪರೀಕ್ಷಿಸಲಾಗಿಲ್ಲ ಎಂಬ ಆಘಾತಕಾರಿ ಮಾಹಿತಿ ಸಿಕ್ಕಿದೆ.

. ಮೊರ್ಬಿಯ ಮಚ್ಚು ನದಿಯ ತೂಗುಸೇತುವೆ ಜನರ ಹೆಚ್ಚಿನ ಭಾರದಿಂದಾಗಿ ಅಕ್ಟೋಬರ್​ 30ರಂದು ಕುಸಿದಿತ್ತು. 135 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!