ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ 1,000 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಒಳಗೊಂಡಿರುವ ಮೊಟ್ಟಮೊದಲ ಎಲ್ಲಾ ಮಹಿಳಾ ಸಿಐಎಸ್ಎಫ್ ಮೀಸಲು ಬೆಟಾಲಿಯನ್ ಗೆ ಅನುಮೋದನೆ ನೀಡಿದೆ.
ಮಂಜೂರಾದ ಸುಮಾರು ಎರಡು ಲಕ್ಷ ಸಿಬ್ಬಂದಿಯಲ್ಲಿಯೇ ಮಹಿಳಾ ಮೀಸಲು ಬೆಟಾಲಿಯನ್ ರಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ಕಮಾಂಡೆಂಟ್ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಒಟ್ಟು 1,025 ಸಿಬ್ಬಂದಿಗಳ ಬಲದೊಂದಿಗೆ ವಿಶೇಷ ಮಹಿಳಾ ಮೀಸಲು ಘಟಕವನ್ನು ಅನುಮೋದಿಸಿ ಕೇಂದ್ರ ಗೃಹ ಸಚಿವಾಲಯವು ಈ ವಾರ ಆದೇಶ ಹೊರಡಿಸಿದೆ ಎಂದು ಅವರು ಹೇಳಿದ್ದಾರೆ.
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್(CISF) ಪ್ರಸ್ತುತ 12 ಮೀಸಲು ಬೆಟಾಲಿಯನ್‌ಗಳನ್ನು ಹೊಂದಿದೆ.
68 ನಾಗರಿಕ ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೋ ಮತ್ತು ತಾಜ್ ಮಹಲ್ ಹಾಗೂ ಕೆಂಪು ಕೋಟೆಯಂತಹ ಐತಿಹಾಸಿಕ ಸ್ಮಾರಕಗಳಂತಹ ಪ್ರಮುಖ ಸ್ಥಳಗಳಲ್ಲಿ CISF ದೊಡ್ಡ ಪ್ರಮಾಣದಲ್ಲಿ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಿದೆ.