ಏಷ್ಯಾ ಕಪ್ ಯೂತ್ ಸ್ಕ್ರ್ಯಾಬಲ್ ಚಾಂಪಿಯನ್‌ಶಿಪ್‌: ಪಾಕಿಸ್ತಾನದ ಸ್ಕ್ರಾಬಲ್ ಆಟಗಾರರಿಗೆ ಭಾರತೀಯ ವೀಸಾ ನಿರಾಕರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾ ಕಪ್ ಯೂತ್ ಸ್ಕ್ರ್ಯಾಬಲ್ ಚಾಂಪಿಯನ್‌ಶಿಪ್ ಮತ್ತು ದೆಹಲಿ ಕಪ್‌ಗಾಗಿ ಭಾರತಕ್ಕೆ ಬರಲು ಪಾಕಿಸ್ತಾನದ ಸ್ಕ್ರ್ಯಾಬಲ್ ಆಟಗಾರರಿಗೆ ವೀಸಾ ನೀಡಲು ಭಾರತೀಯ ಹೈಕಮಿಷನ್ ನಿರಾಕರಿಸಿದೆ.

ಪಾಕಿಸ್ತಾನ ವರ್ಲ್ಡ್ ಯೂತ್ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಯೂತ್ ಚಾಂಪಿಯನ್‌ಶಿಪ್‌ಗಳನ್ನು ಪಡೆದಿದೆ. ಇದೀಗ ಭಾರತೀಯ ಹೈಕಮಿಷನ್ ಈ ಆಟಗಾರರಿಗೆ ವೀಸಾ ನೀಡುವುದಿಲ್ಲ ಎಂದು ಖಚಿತಪಡಿಸಿದೆ ಎಂದು ಪಾಕಿಸ್ತಾನ್ ಸ್ಕ್ರ್ಯಾಬಲ್ ಅಸೋಸಿಯೇಷನ್ ​​(PSA) ನಿರ್ದೇಶಕ ತಾರಿಕ್ ಪೆರೇಜ್ ತಿಳಿಸಿದ್ದಾರೆ.

2 ತಿಂಗಳ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸಿದ್ದರೂ, ಭಾರತೀಯ ಹೈಕಮಿಷನ್ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಆಟಗಾರರು ಹಾಜರಾಗಲು ತಡವಾಗಿ ಕೆಲವು ವೀಸಾಗಳನ್ನು ನೀಡುತ್ತಿದೆ ಎಂದು ಪೆರೇಜ್ ತಿಳಿಸಿದ್ದಾರೆ. ಯಾವುದೇ ವಿವರಣೆಯಿಲ್ಲದೆ ಅರ್ಧದಷ್ಟು ಆಟಗಾರರಿಗೆ ವೀಸಾ ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದರಲ್ಲಿ ಈ ಹಿಂದೆ ಟೂರ್ನಿಯಲ್ಲಿ ಪಾಲ್ಗೊಂಡು ಕಳೆದ ವರ್ಷ ಗೆದ್ದ ಆಟಗಾರರೂ ಸೇರಿದ್ದಾರೆ.

ಪಾಕಿಸ್ತಾನದ ಆಟಗಾರರು ಲಾಹೋರ್‌ಗೆ ಹೋದರು. ಅವರಿಗೆ ವೀಸಾಗಳನ್ನು ನಿರೀಕ್ಷಿಸಲಾಗಿತ್ತು. ಆದರೆ, ಈಗ ಕರಾಚಿಗೆ ವಾಪಾಸ್ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ 16 ವರ್ಷದ ಸ್ಕ್ರಾಬಲ್ ಆಟಗಾರ ಅಫಾನ್ ಸಲ್ಮಾನ್ 2 ತಿಂಗಳ ಹಿಂದೆ ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆದ ವರ್ಲ್ಡ್​ ಯೂತ್ ಸ್ಕ್ರ್ಯಾಬಲ್ ಅನ್ನು ಗೆದ್ದಿದ್ದರು. ಪಾಕಿಸ್ತಾನ ತಂಡ ಪಂದ್ಯಾವಳಿಯಲ್ಲಿ ಅಗ್ರ ತಂಡವಾಗಿ ಶ್ರೇಯಾಂಕ ಪಡೆದಿದೆ ಮತ್ತು ಟೀಮ್ ಟ್ರೋಫಿಯನ್ನೂ ಗೆದ್ದಿದೆ. ಇದು ಅಗ್ರ 10ರಲ್ಲಿ ನಾಲ್ವರು ಆಟಗಾರರನ್ನು ಹೊಂದಿತ್ತು. ಅಫ್ಫಾನ್ ಅವರ ಸಹೋದರ ಅಲಿ ಸಲ್ಮಾನ್ ಸಹ 2022ರಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು.

ದೆಹಲಿಯಲ್ಲಿ ನಡೆಯಲಿರುವ ಏಷ್ಯಾ ಕಪ್ ಯೂತ್ ಸ್ಕ್ರ್ಯಾಬಲ್ ಚಾಂಪಿಯನ್‌ಶಿಪ್ ಎರಡು ವಿಭಾಗಗಳನ್ನು ಹೊಂದಿದೆ. 2007ರ ಜನವರಿ 1ರಂದು ಅಥವಾ ನಂತರ ಜನಿಸಿದ ಆಟಗಾರರು ಈ ಪಂದ್ಯಾವಳಿಯಲ್ಲಿ ಆಡಬಹುದು. ಕಪ್‌ನಲ್ಲಿ ಅಗ್ರ 10 ಆಟಗಾರರಿಗೆ ಮತ್ತು ಪ್ಲೇಟ್ ವಿಭಾಗದಲ್ಲಿ ಅಗ್ರ 5 ಆಟಗಾರರಿಗೆ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ನೀಡಲಾಗುವುದು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!