ರಾಜ್ಯದಲ್ಲಿ ಮೊದಲ BNS ಪ್ರಕರಣ ದಾಖಲು: ಯಾವ ಜಿಲ್ಲೆಯಲ್ಲಿ ಯಾವ ಕೇಸ್? ಇಲ್ಲಿದೆ ಮಾಹಿತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಮೊದಲ ಬಿಎನ್ಎಸ್ (BNS) ಪ್ರಕರಣ ಹಾಸನದಲ್ಲಿ ದಾಖಲಾಗಿದೆ.

ಇಂದಿನಿಂದ ದೇಶಾದ್ಯಂತ ಜಾರಿಯಾಗುತ್ತಿರುವ ನೂತನ ಅಪರಾಧ ಕಾಯಿದೆ ಭಾರತೀಯ ನ್ಯಾಯ ಸಂಹಿತೆಯ (Bharatiya Nyaya Sanhita) ಅಡಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಮಹಿಳೆಯೊಬ್ಬರ ಸಾವಿಗೆ ಕಾರಣನಾದ ಚಾಲಕನ ಮೇಲೆ ಪ್ರಯೋಗಿಸಲ್ಪಟ್ಟಿದೆ.

ಹಾಸನ ರೂರಲ್ ಪೊಲೀಸ್ ಠಾಣೆಯಲ್ಲಿ ರಾಜ್ಯದ ಈ ಮೊದಲ ಬಿಎನ್ಎಸ್ ಪ್ರಕರಣ ಬೆಳಗ್ಗೆ 6.30‌ಕ್ಕೆ ದಾಖಲಾಗಿದೆ. ವೈದ್ಯ ಶಂಕರೇಗೌಡ ಎಂಬವರು ನೀಡಿದ ದೂರಿನ ಮೇಲೆ ಇದನ್ನು ಕಾಯಿದೆಯ ಸೆಕ್ಷನ್ 281, 106 ಅಡಿ ದಾಖಲು ಮಾಡಿಕೊಳ್ಳಲಾಗಿದೆ. ಸಾಗರ್ ಎಂಬ ಕಾರು ಚಾಲಕನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಈತ ಅತಿ ವೇಗ ಹಾಗು ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿ ಮಹಿಳೆಯ ಸಾವಿಗೆ ಕಾರಣನಾಗಿದ್ದಾನೆ ಎಂದು ದೂರಲಾಗಿದೆ.

ದೂರು ನೀಡಿದ ವೈದ್ಯರ ಅತ್ತೆಯಾದ ಇಂದು ಎಂಬ ಮಹಿಳೆ ಮೃತಪಟ್ಟಿದ್ದಾರೆ. ಹಾಸನದ ಹಳೆಬೀಡು ರಸ್ತೆ ಸೀಗೇಗೇಟ್ ಹತ್ತಿರ ಸೇತುವೆಯಿಂದ ಕೆಳಗೆ ಕಾರು ಪಲ್ಟಿಯಾಗಿತ್ತು. ಬೆಂಗಳೂರು ಏರ್‌ಪೋರ್ಟ್‌ನಿಂದ ಶಂಕರೇಗೌಡನರ ಅತ್ತೆ ಇಂದು, ‌ಮಾವ ಯೋಗೇಶ್ ಅವರನ್ನು ಚಾಲಕ ಸಾಗರ್ ಪಿಕಪ್ ಮಾಡಿದ್ದ. ಅಪಘಾತದಲ್ಲಿ ಯೋಗೇಶ್ ಬಚಾವ್ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!