ಉಕ್ರೇನ್‌ ಸಚಿವೆ ಝಪರೋವಾ ಇಂದಿನಿಂದ 4 ದಿನಗಳ ಭಾರತ ಪ್ರವಾಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಉಪ ಸಚಿವೆ ಎಮಿನೆ ಝಪರೋವಾ ನಾಲ್ಕು ದಿನಗಳ ಭೇಟಿಗಾಗಿ ಇಂದು ಭಾರತಕ್ಕೆ ಆಗಮಿಸಲಿದ್ದಾರೆ. ಈ ಭೇಟಿ ರಷ್ಯಾ-ಉಕ್ರೇನ್ ಯುದ್ಧದ ನಂತರ ಮೊದಲ ಭೇಟಿಯಾಗಿದ್ದು, ಅತ್ಯಂತ ಮಹತ್ವದ ಭೇಟಿ ಇದಾಗಿದೆ.

ಭಾರತಕ್ಕೆ ಭೇಟಿ ವೇಳೆ ಎಮಿನೆ ಝಪರೋವಾ ಅವರು ಎಂಇಎ ಕಾರ್ಯದರ್ಶಿ (ಪಶ್ಚಿಮ) ಸಂಜಯ್ ವರ್ಮಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಉಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿ ಮತ್ತು ಹಿತಾಸಕ್ತಿಯ ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.

‘ಎಮಿನಿ ಅವರು ಇದೇ 9 ರಿಂದ 12ರ ವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸುವ ದಿಸೆಯಲ್ಲಿ ಹಾಗೂ ಉಕ್ರೇನ್‌ನ ಸದ್ಯದ ಪರಿಸ್ಥಿತಿ ಕುರಿತು ಅವರು ಸಂಜಯ್‌ ವರ್ಮಾ ಜೊತೆ ಚರ್ಚೆ ನಡೆಸಲಿದ್ದಾರೆ. ಭಾರತದ ಉಪ ಭದ್ರತಾ ಸಲಹೆಗಾರ ವಿಕ್ರಂ ಮಿಶ್ರಿ ಅವರನ್ನೂ ಭೇಟಿಯಾಗಲಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಪ್ರತಿಕ್ರಿಯಿಸಲು ಭಾರತವು ಇಲ್ಲಿಯವರೆಗೆ ಸಂಯಮವನ್ನು ಹೊಂದಿದೆ. ಆದರೂ, ಅದು ಎರಡೂ ಕಡೆಯಿಂದ ಕದನ ವಿರಾಮಕ್ಕೆ ಕರೆ ನೀಡಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!