RECIPE| ಬೆಳಗಿನ ತಿಂಡಿಗೆ ಮಂಗಳೂರು ಬನ್ ಹೀಗೆ ಮಾಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಪದಾರ್ಥಗಳು:

1.5 ಬಟ್ಟಲು ಗೋದಿ/ಮೈದಾ ಹಿಟ್ಟು, 1ದೊಡ್ಡ ಬಾಳೆಹಣ್ಣು, 2-3 ಚಮಚ ಮೊಸರು, 2-3 ಚಮಚ ಸಕ್ಕರೆ, 1/4 ಚಮಚ ಅಡಿಗೆ ಸೋಡಾ, 1/2 ಚಮಚ ಜೀರಿಗೆ, 1/2 ಚಮಚ ಉಪ್ಪು
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಬಾಳೆಹಣ್ಣನ್ನು ಚೆನ್ನಾಗಿ ನುರಿಸಿಕೊಳ್ಳಿ, ಅದಕ್ಕೆ ಉಪ್ಪು, ಸಕ್ಕರೆ, ಸೋಡಾ, ಜೀರಿಗೆ ಮತ್ತು ಮೊಸರು ಸೇರಿಸಿ ಮಿಶ್ರಣ ಮಾಡಿಕೊಳ್ಳಿ (ಬೇಕಾದಲ್ಲಿ ಮಿಕ್ಸರಿನಲ್ಲಿ ರುಬ್ಬಿಕೊಳ್ಳಬಹುದು). ಗೋದಿ ಹಿಟ್ಟು ಇಲ್ಲವೇ ಮೈದಾ ಹಿಟ್ಟಿಗೆ ಬಾಳೆಹಣ್ಣಿನ ಮಿಶ್ರಣ ಸೇರಿಸಿ ಚೆನ್ನಾಗಿ ನಾದಿರಿ. ಈ ಕಲಸಿದ ಹಿಟ್ಟನ್ನು 3-4 ಗಂಟೆ ವರೆಗೆ ಮುಚ್ಚಿ ಇಡಿ ಆಮೇಲೆ ಸಣ್ಣ ಗಾತ್ರದ, 1/4 ಅಂಗುಲ ದಪ್ಪದ ಪೂರಿಗಳನ್ನು ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ. ಟೊಮೇಟೊ ಕೆಚಪ್ ಅಥವಾ ಚಟ್ನಿಯೊಂದಿಗೆ ಮಂಗಳೂರು ಬನ್ ಸವಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!