ಹೊಸದಿಗಂತ ಡಿಜಿಟಲ್ ಡೆಸ್ಕ್:
ನೂತನ ಸಂಸತ್ ಭವನದಲ್ಲಿ ಲೋಕಸಭೆಯ ಮೊದಲ ಕಲಾಪ ಆರಂಭವಾಗಿದೆ. ಇದಕ್ಕೂ ಮೊದಲು ಸ್ಪೀಕರ್ ಓಂ ಬಿರ್ಲಾ ಮಾತನಾಡಿ, “ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಬಹಳ ಮಹತ್ವದ ದಿನವಾಗಿದೆ, ಏಕೆಂದರೆ ನಾವು ಹೊಸ ಸಂಸತ್ತಿನ ಕಟ್ಟಡದಲ್ಲಿ ಲೋಕಸಭೆಯ ಕಲಾಪವನ್ನು ಪ್ರಾರಂಭಿಸುತ್ತಿದ್ದೇವೆ. ಈ ಐತಿಹಾಸಿಕ ದಿನದಂದು ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.” ಎಂದರು.
ಭವನದ ಕೆಳಮನೆ ಕೊಠಡಿಯಲ್ಲಿ ಲೋಕಸಭೆಯ ಕಲಾಪ ನಡೆಯುತ್ತಿದೆ. ಮಧ್ಯಾಹ್ನ 2.15ಕ್ಕೆ ರಾಜ್ಯಸಭೆಯ ಕಲಾಪವೂ ಆರಂಭವಾಗಲಿದೆ.