ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಳೆಯ ಸಂಸತ್ ಕಟ್ಟಡ ಇನ್ಮುಂದೆ ಸಂವಿಧಾನ ಸದನ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.
ಸಂಸತ್ ಭವನದಲ್ಲಿ ಕೊನೆಯ ಭಾಷಣದ ವೇಳೆ ಇನ್ಮುಂದೆ ಸಂವಿಧಾನ ಭವನ ಎಂದು ಕರೆಯಬಹುದು ಎಂದು ಹೇಳಿದ್ದಾರೆ. ಕೊನೆಯ ಭಾಷಣ ಮುಗಿಸಿ ಎಲ್ಲರನ್ನೂ ಸಂಸತ್‌ನ ಹೊಸ ಕಟ್ಟಡಕ್ಕೆ ಕರೆದೊಯ್ದಿದ್ದಾರೆ.
ಇಂದು ಗಣೇಶ ಚತುರ್ಥಿ, ಮಂಗಳಕರ ದಿನ, ಇಂದು ನಾವು ಹಳೆಯ ಸಂಸತ್ ಭವನ ಬಿಟ್ಟು ನೂತನ ಸಂಸತ್ ಭವನಕ್ಕೆ ಹೋಗುತ್ತಿದ್ದೇವೆ ಎಂದ್ದಾರೆ.