ದೇಶದ ಇತಿಹಾಸದಲ್ಲಿಯೇ ಮೊದಲು: ಇಂದೋರ್‌ ಬಿಜೆಪಿ ಅಭ್ಯರ್ಥಿ 10 ಲಕ್ಷ ಮತಗಳ ಅಂತರದಿಂದ ಗೆಲುವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 
 
ಮಧ್ಯಪ್ರದೇಶದ ಇಂದೋರ್‌ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ಶಂಕರ್‌ ಲಾಲ್ವಾನಿಅವರು ಸುಮಾರು 10 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ದೇಶದ ಇತಿಹಾಸದಲ್ಲಿಯೇ ಗರಿಷ್ಠ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಕೀರ್ತಿ ಶಂಕರ್‌ ಲಾಲ್ವಾನಿ ಅವರದ್ದಾಗಿದೆ.

ಇಂದೋರ್‌ ಲೋಕಸಭೆ ಕ್ಷೇತ್ರದಲ್ಲಿ ಶಂಕರ್‌ ಲಾಲ್ವಾನಿ ಅವರು 12,26,751 ಮತಗಳನ್ನು ಪಡೆದಿದ್ದಾರೆ. ಇನ್ನು, ನೋಟಾಗೆ (ನನ್‌ ಆಫ್‌ ದಿ ಅಬೋವ್) ‌2,18,674 ಮತಗಳು ಲಭಿಸಿದ ಕಾರಣ 10,08,077 ಮತಗಳಿಂದ ಶಂಕರ್‌ ಲಾಲ್ವಾನಿ ಅವರು ಗೆಲುವು ಸಾಧಿಸಿದ್ದಾರೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

ಬಿಎಸ್‌ಪಿಯ ಸಂಜಯ್‌ ಅವರು 52,659 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ.

ಇಂದೋರ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಕ್ಷಯ್ ಕಾಂತಿ ಬಾಮ್‌ ಕಣಕ್ಕಿಳಿದಿದ್ದರು. ಬಳಿಕ ಕೊನೆಯ ಕ್ಷಣದಲ್ಲಿ ತಮ್ಮ ಉಮೇದುವಾರಿಗೆ ಹಿಂದಕ್ಕೆ ಪಡೆದಿದ್ದರು. ಇದರಿಂದ ಬೇರೆ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ತನ್ನ ಅಭ್ಯರ್ಥಿ ದ್ರೋಹ ಎಸಗಿದ್ದಾರೆ. ಹೀಗಾಗಿ ಬೇರೆ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಕೈ ಪಡೆ ಮಧ್ಯಪ್ರದೇಶ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ ಅಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಹೆಚ್ಚಿನ ಜನ ನೋಟಾಗೆ ಮತ ಹಾಕಿದ್ದರು.ಹೀಗಾಗಿ ಕಾಂಗ್ರೆಸ್ ʼಪ್ರಜಾಪ್ರಭುತ್ವ ಉಳಿಸುವ’ ಮತ್ತು ‘ನೈತಿಕ ವಿಜಯ’ಕ್ಕಾಗಿ ಅದು ಹೋರಾಟ ನಡೆಸುವುದಾಗಿ ತಿಳಿಸಿ ʼನೋಟಾʼಕ್ಕೆ ಮತ ಚಲಾಯಿಸುವಂತೆ ವ್ಯಾಪಕ ಪ್ರಚಾರ ನಡೆಸಿತ್ತು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!