ಪಾಶ್ಚಾತ್ಯ ವೈದ್ಯಕೀಯದಲ್ಲಿ ಪದವಿ ಪಡೆದ ಮೊದಲ ಭಾರತೀಯ ಮಹಿಳೆ!

ತ್ರಿವೇಣಿ ಗಂಗಾಧರಪ್ಪ

ಇತ್ತೀಚಿನ ದಿನಗಳಲ್ಲಿ ವೈದ್ಯರಿಗೇನು ಬರ ಇಲ್ಲ ಬಿಡಿ, ಎಲ್ಲಿ ನೋಡಿದರೂ ಮೆಡಿಕಲ್‌ ಕಾಲೇಜುಗಳ ವಾಸನೆ ಮೂಗಿಗೆ ಬಡಿಯುತ್ತಿರುತ್ತವೆ. ಆದರೆ 19ನೇ ಶತಮಾನ ಇದಕ್ಕೆ ವಿರುದ್ಧ. ಹೆಣ್ಣುಮಕ್ಕಳ ಶಿಕ್ಷಣವಿರಲಿ…ಶಿಕ್ಷಣ ಕೊಡುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಂತ ಕಾಲದಲ್ಲಿ ಈಕೆ ಪಾಶ್ಚಾತ್ಯ ವೈದ್ಯಕೀಯದಲ್ಲಿ ಪದವಿ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ʻಆನಂದಿಬಾಯಿ ಜೋಶಿʼ ಪಾತ್ರರಾಗಿದ್ದಾರೆ.

1865 ರಲ್ಲಿ ಥಾಣೆಯ ಕಲ್ಯಾಣ್‌ನಲ್ಲಿ ಸಾಂಪ್ರದಾಯಿಕ ಮರಾಠಿ ಹಿಂದೂ ಕುಟುಂಬದಲ್ಲಿ ಜನಿಸಿದ ಆನಂದಿ(ಈಕೆಯ ಮೂಲ ಹೆಸರು ಯಮುನಾ) ಒಂಭತ್ತು ವರ್ಷದಲ್ಲಿಯೇ ಗೋಪಾಲರಾವ್ ಜೋಶಿ ಎಂಬುವವರನ್ನು ವಿವಾಹವಾದರು. ಆನಂದಿಯವರಿಗಿಂತ ಸುಮಾರು 20 ವರ್ಷಗಳಷ್ಟು ಹಿರಿಯರಾಗಿದ್ದರೂ, ಅವರ ಪ್ರಗತಿಪರ ಚಿಂತನೆಯು ದೇಶದ ಆರೋಗ್ಯ ಕ್ಷೇತ್ರದ ಆರಂಭಿಕ ಪ್ರವರ್ತಕರಲ್ಲಿ ಒಬ್ಬರಾಗುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಸ್ವತಂತ್ರ ಪೂರ್ವ ಭಾರತದಲ್ಲಿ ಸೂಕ್ತವಾದ ವೈದ್ಯಕೀಯ ಆರೈಕೆಯು ಅಪರೂಪವಾಗಿತ್ತು ಮತ್ತು ಆನಂದಿ ಕೇವಲ 14 ವರ್ಷದವಳಿದ್ದಾಗ ದಂಪತಿ 10ದಿನದ ಶಿಶುವನ್ನು ಕಳೆದುಕೊಂಡ ದುಃಖದಲ್ಲಿ ಮತ್ತಷ್ಟು ಮುಳುಗಿದ್ದರು.

ಕನಸಿನ ಬೆನ್ನೇರಿ ಆನಂದಿ ಜೋಶಿ

1883 ರಲ್ಲಿ, ಗೋಪಾಲರಾವ್ ಅವರನ್ನು ಪಶ್ಚಿಮ ಬಂಗಾಳದ ಸೆರಾಂಪೋರ್‌ಗೆ ವರ್ಗಾಯಿಸಲಾಯಿತು. ಆಗಲೇ ಆನಂದಿ ಫಿಲಡೆಲ್ಫಿಯಾದಲ್ಲಿನ ಮೆಡಿಕಲ್ ಕಾಲೇಜ್ ಆಫ್ ಪೆನ್ಸಿಲ್ವೇನಿಯಾದ ಸೂಪರಿಂಟೆಂಡೆಂಟ್‌ಗೆ ಪ್ರವೇಶ ಅರ್ಜಿಯನ್ನು ಬರೆದರು, ಇದು ವಿಶ್ವದ ಮೊದಲ ಮಹಿಳಾ ವೈದ್ಯಕೀಯ ಕಾಲೇಜು. ಅದೇ ವರ್ಷ ಸೆರಾಂಪೋರ್ ಕಾಲೇಜ್ ಹಾಲ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ವೈದ್ಯಕೀಯದಲ್ಲಿ ಸಾಗರೋತ್ತರ ಶಿಕ್ಷಣವನ್ನು ಮುಂದುವರಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡರು. ಈ ನಿರ್ಧಾರದ ನೇರ ಪರಿಣಾ ದಂಪತಿ ಎದುರಿಸಿದ ಕಳಂಕವನ್ನು ವಿವರಿಸಿದರು.

19 ನೇ ಶತಮಾನದ ಭಾರತದಲ್ಲಿ, ವೈದ್ಯಕೀಯ ವೃತ್ತಿಯನ್ನು ಮುಂದುವರಿಸಲು ಬಯಸುವ ಮಹಿಳೆಯರು ಶುಶ್ರೂಷಕಿಯರಾಗಿ ಕೆಲಸ ಮಾಡಬೇಕೆಂಬ ನಿಯಮವಿತ್ತು. ಚೆನ್ನೈನಲ್ಲಿ ಡಾಕ್ಟರೇಟ್ ಕೋರ್ಸ್ ಲಭ್ಯವಿದ್ದರೂ ಸಹ, ಅದರ ಪುರುಷ ಬೋಧಕರು ಸಂಪ್ರದಾಯವಾದಿಗಳಾಗಿದ್ದರಿಂದ ಮಹಿಳಾ ವಿದ್ಯಾರ್ಥಿಗಳ ಕಲ್ಪನೆಯನ್ನು ವಿರೋಧಿಸಲಾಯಿತು. ಇದರಿಂದ ರೋಸಿ ಹೋದ ಗೋಪಾಲರಾವ್ 1880ರಲ್ಲಿ ಅಮೆರಿಕದ ಪ್ರಮುಖ ಮಿಷನರಿ ರಾಯಲ್ ವೈಲ್ಡರ್ ಅವರಿಗೆ ಒಂದು ಪತ್ರವನ್ನು ಕಳುಹಿಸಿ ಅದರಲ್ಲಿ ಆನಂದಿಯ ಪ್ರವೇಶವನ್ನು ಪಡೆಯಲು ಸಹಾಯವನ್ನು ಕೋರಿದರು. ಇದನ್ನ ಸ್ವಾರ್ಥಕ್ಕೆ ಬಳಸಿಕೊಂಡ ವೈಲ್ಡರ್ ಬರೆದ ಉತ್ತರದಲ್ಲಿ ಒಂದು ಕಂಡಿಷನ್‌ ಇತ್ತು ಅಂದರೆ, ಜೋಶಿ ದಂಪತಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಮಾತ್ರ ಸಾಧ್ಯವಾಗುತ್ತದೆ ಎಂದು ಬರೆದಿತ್ತು. ಬ್ರಾಹ್ಮಣ ದಂಪತಿ ಈ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದರು.

1883 ರಲ್ಲಿ ದೂರದ ವಿದೇಶಿ ಭೂಮಿ ತಲುಪಲು ಸಮುದ್ರವನ್ನು ದಾಟುವುದು ಸಾಂಪ್ರದಾಯಿಕ ‘ಮೇಲ್ಜಾತಿ’ ಹಿಂದೂ ವಲಯಗಳಲ್ಲಿ ಪಾಪವೆಂದು ಪರಿಗಣಿಸಲಾಗಿತ್ತು. ಹಾಗಾಗಿಯೇ ಅವರ ನಿವಾಸದ ಮೇಲೆ ಕಲ್ಲು ಮತ್ತು ದನದ ಸಗಣಿ ಎಸೆದಿದ್ದಲ್ಲದೆ ಗೋಪಾಲರಾವ್ ಕೆಲಸ ಮಾಡುತ್ತಿದ್ದ ಅಂಚೆ ಕಚೇರಿಯಲ್ಲೂ ಗಲಾಟೆ ಮಾಡಿದರು.

ಕೊನೆಗೊಂದು ಸಭೆಯಲ್ಲಿ ವೈದ್ಯಕೀಯ ಓದಿಗಾಗಿ ಅಮೆರಿಕಕ್ಕೆ ಹೋಗುವ ಇಂಗಿತ ವ್ಯಕ್ತಪಡಿಸಿದ ಆನಂದಿಗೆ ಭರಪೂರ ಬೆಂಬಲ ದೊರೆಯಿತು. ಸ್ಥಳೀಯ ಮಹಿಳೆಯರು, ಪುರುಷ ವೈದ್ಯರಿಂದ ಚಿಕಿತ್ಸೆಗೆ ತುರ್ತು ಸಂದರ್ಭಗಳಲ್ಲಿ ತಮ್ಮನ್ನು ತಾವು ಒಡ್ಡಿಕೊಳ್ಳಲು ಸ್ವಾಭಾವಿಕವಾಗಿ ಹಿಂಜರಿಯುತ್ತಾರೆ. ಭಾರತದಲ್ಲಿ ಹಿಂದೂ ಮಹಿಳಾ ವೈದ್ಯರ ಅವಶ್ಯಕತೆ ಹೆಚ್ಚುತ್ತಿದೆ ಎಂದು ವಿನಮ್ರವಾಗಿ ತಿಳಿಸಿದರು. ಜೊತೆಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ದೇಶಕ್ಕೆ ಹಿಂದಿರುಗಿದ ನಂತರ ಮಹಿಳೆಯರಿಗಾಗಿ ಭಾರತೀಯ ವೈದ್ಯಕೀಯ ಕಾಲೇಜು ತೆರೆಯುವ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸಿದರು.

ಆನಂದಿಯ ಭಾಷಣ ವ್ಯಾಪಕವಾಗಿ ಪ್ರಚಾರ ಮಾಡಲಾಯಿತು ಮತ್ತು ಅವರ ಉದಾತ್ತ ಪ್ರಯತ್ನವನ್ನು ಬೆಂಬಲಿಸಲು ದೇಶಾದ್ಯಂತ ಆರ್ಥಿಕ ಸಹಾಯ ಕೂಡತೊಡಗಿತು. ವೈಲ್ಡರ್ ಆನಂದಿಗೆ ಅಮೇರಿಕನ್ ವೈದ್ಯಕೀಯ ಕಾಲೇಜಿಗೆ ಪ್ರವೇಶವನ್ನು ಪಡೆಯಲು ಸಹಾಯ ಮಾಡಲು ಸಾಧ್ಯವಾಗದಿದ್ದರೂ, ಅವರು ತಮ್ಮ ಪತ್ರವ್ಯವಹಾರವನ್ನು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ನಿಯತಕಾಲಿಕವಾಗಿ ಮಿಷನರಿ ರಿವ್ಯೂನಲ್ಲಿ ಪ್ರಕಟಿಸಿದರು. ಇದು ಅಂತಿಮವಾಗಿ ಒಬ್ಬ ಥಿಯೋಡಿಸಿಯಾ ಕಾರ್ಪೆಂಟರ್‌ನ ಕಣ್ಣಿಗೆ ಬಿದ್ದಿತು. ನ್ಯೂಜೆರ್ಸಿ ಮೂಲದ ಮಹಿಳೆ 1880 ರಲ್ಲಿ ಆನಂದಿಗೆ ಪತ್ರ ಬರೆದು ಸಾಧ್ಯವಿರುವ ರೀತಿಯಲ್ಲಿ ತನ್ನ ಶೈಕ್ಷಣಿಕ ಪ್ರಯಾಣದಲ್ಲಿ ಆಕೆಯನ್ನು ಬೆಂಬಲಿಸುವ ಬಯಕೆ ವ್ಯಕ್ತಪಡಿಸಿದರು.

ಮೂರು ವರ್ಷಗಳ ಕಾಲ ಅವರ ಪರಸ್ಪರ ಪರಿಚಯ ಆನಂದಿ ನ್ಯೂಯಾರ್ಕ್‌ಗೆ ಬಂದಿಳಿದಾಗ ಆತ್ಮೀಯ ಸ್ವಾಗತ ಸಿಕ್ಕಿತು. ಮೂರು ವರ್ಷಗಳ ಆನಂದಿಯ ಸಂಪೂರ್ಣ ದೃಢಸಂಕಲ್ಪ ಮತ್ತು ಪರಿಶ್ರಮವೇ ಆಕೆಯನ್ನು “ಆರ್ಯನ್ ಹಿಂದೂಗಳಲ್ಲಿ ಪ್ರಸೂತಿಶಾಸ್ತ್ರ” ಎಂಬ ಪ್ರಬಂಧದೊಂದಿಗೆ ಎಂಡಿ ಪದವಿಯನ್ನು ಪೂರ್ಣಗೊಳಿಸಲು ಕಾರಣವಾಯಿತು.

ಕನಸು ನನಸಾದ ದಿನ

1886 ರ ಮಾರ್ಚ್ 11ರಂದು ತನ್ನ ಪದವಿ ಪ್ರದಾನ ಸಮಾರಂಭದಲ್ಲಿ, “ಇಂದು ಈ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸಮಯ ಎಂದು ಕಾಲೇಜಿನ ಅಧ್ಯಕ್ಷರು ಹೇಳಿದ್ದರು” ವೈದ್ಯಕೀಯದಲ್ಲಿ ಪದವಿ ಪಡೆದು ಈ ಕಾಲೇಜಿಗೆ ಗೌರವ ಸಲ್ಲಿಸುತ್ತಿರುವ ಮೊದಲ ಭಾರತೀಯ ಮಹಿಳೆ ನಮ್ಮಲ್ಲಿದ್ದಾರೆ ಎಂದರು.

ರಾಣಿ ವಿಕ್ಟೋರಿಯಾ ಅವರಿಂದ ಕೂಡ ಅಭಿನಂದನಾ ಸಂದೇಶವನ್ನು ಸ್ವೀಕರಿಸಿದರು. ಭಾರತಕ್ಕೆ ಹಿಂದಿರುಗಿದ ನಂತರ 21 ವರ್ಷದ ಆನಂದಿ, ಕೊಲ್ಲಾಪುರದ ರಾಜಪ್ರಭುತ್ವದ ಆಲ್ಬರ್ಟ್ ಎಡ್ವರ್ಡ್ ಆಸ್ಪತ್ರೆಯ ಮಹಿಳಾ ವಿಭಾಗದ ವೈದ್ಯಾಧಿಕಾರಿಯಾಗಿ ನೇಮಕಗೊಂಡರು. ಆನಂದಿ ಕನಸಾಗಿದ್ದ ಮಹಿಳಾ ವೈದ್ಯಕೀಯ ಕಾಲೇಜು ಕನದು ಕನಾಸಗಿಯೇ ಉಳಿಯಿತು. ದುರದೃಷ್ಟವಶಾತ್‌ ಫೆಬ್ರವರಿ 26, 1887ರ 22ವಯಸ್ಸಿಗೇ ಕ್ಷಯರೋಗಕ್ಕೆ ಬಲಿಯಾದಳು.

ಆನಂದಿ ಬದುಕು ಅನಾದಿ ಕಾಲದಿಂದಲೂ ಸಮಾಜದ ನಿರೀಕ್ಷೆಗಳ ಅಧಃಪತನದ ಒಂದು ನೋಟವನ್ನು ನೀಡುತ್ತದೆ. ಈಕೆಯ ಧೃಡ ಸಂಕಲ್ಪ  ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿ ಉಳಿಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!