ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದಯಪುರದಲ್ಲಿ ಒಮಿಕ್ರಾನ್ ಸೋಂಕು ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಭಾರತದಲ್ಲಿ ಒಮಿಕ್ರಾನ್‌ನಿಂದ ಮೊದಲ ಸಾವು ಇದಾಗಿದೆ. 73 ವರ್ಷದ ವ್ಯಕ್ತಿಯೊಬ್ಬರಿಗೆ ಒಮಿಕ್ರಾನ್ ಸೋಂಕು ತಗುಲಿತ್ತು.
ಮಧುಮೇಹ, ಅಧಿಕ ರಕ್ತದೊತ್ತಡ ಮುಂದಾದ ಸಮಸ್ಯೆಗಳು ಅವರಿಗಿತ್ತು. ಡಿ.15 ರಂದು ಕೋವಿಡ್ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸ್ಯಾಂಪಲ್‌ಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗಿತ್ತು. ನಂತರ ಡಿ.21 ರಂದು ಮತ್ತೆ ಕೊರೋನಾ ಪರೀಕ್ಷೆ ಮಾಡಿದ್ದು, ವರದಿ ನೆಗೆಟಿವ್ ಬಂದಿತ್ತು. ಡಿ.25 ರಂದು ಜೀನೋಮ್ ಸೀಕ್ವೆನ್ಸಿಂಗ್ ವರದಿ ಫಲಿತಾಂಶ ಬಂದಿದ್ದು, ಇದರಲ್ಲಿ ಒಮಿಕ್ರಾನ್ ಇರುವುದು ದೃಢವಾಗಿತ್ತು.