ಹಾಸನದ ಹಲವೆಡೆ ವರ್ಷದ ಮೊದಲ ಮಳೆಯ ಸಿಂಚನ: ವಾಹನ ಸವಾರರ ಪರದಾಟ

ಹೊಸದಿಗಂತ ವರದಿ ಹಾಸನ :

ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಭಾರಿ ಬಿರುಗಾಳಿ ಸಿಡಿಲಿನ ಆರ್ಭಟದೊಂದಿಗೆ ವರ್ಷದ ಮೊದಲ ಮಳೆ ಆರ್ಭಟಿಸಿತು. ಹಾಸನ, ಚನ್ನರಾಯಪಟ್ಟಣ, ಆಲೂರು, ಸಕಲೇಶಪುರ ಭಾಗಗಳಲ್ಲಿ ಮಳೆಯಾಗಿದ್ದು, ವಿಶೇಷವಾಗಿ ಸಕಲೇಶಪುರ ತಾಲ್ಲೂಕಿನ ಹಲವೆಡೆ ಗುರುವಾರ ಉತ್ತಮ ಮಳೆಯಾಗಿದೆ.

ಹಾಸನದಿಂದ ಬೆಂಗಳೂರು ತೆರಳುತ್ತಿದ್ದ ಸಾರಿಗೆ ಬಸ್ ಮಳೆ ನಡುವೆ ಸಾರಿಗೆ ಬಸ್‌ನಲ್ಲಿ ವೈಪರ್ ಇಲ್ಲದೆ ಚಾಲಕ ಪರದಾಟ ನಡೆಸಿದ್ದಾನೆ. KA-18-F-0913 ನಂಬರ್‌ನ ಕೆಎಸ್‌ಆರ್‌ಟಿಸಿ ಬಸ್ ಕಷ್ಟಪಟ್ಟು ಬಸ್ ಚಲಾಯಿಸಿದ ಚಾಲಕ. ಈ ವೇಳೆ ಚನ್ನರಾಯಪಟ್ಟಣದಲ್ಲಿ ಟಿಕೆಟ್ ವಾಪಾಸ್ ಕೊಡಿ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ವಿಚ್ ಸರಿಯಿಲ್ಲದೇ ಕಾರಣ ವೈಪರ್ ಆನ್ ಆಗುತ್ತಿಲ್ಲ. ಬೇಸಿಗೆ ಆದ್ದರಿಂದ ಪರಿಶೀಲಿಸಿಲ್ಲ ಎಂದು ನಿರ್ವಾಹಕ ಸಬೂಬು ಹೇಳಿದ್ದಾರೆ.

ಧಾರಾಕಾಳ ಮಳೆ ಬಿರುಗಾಳಿಗೆ ಹಾಸನ ನಗರದ, ಶಂಕರಮಠದಲ್ಲಿ ಬೆಳಿದ್ದಿದ್ದ ಹಲಸಿನ ಮರದ‌ ಕೊಂಬೆ ಮುರಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ವರುಣ ಬೇಸಿಗೆ ಝಳದಿಂದ ತತ್ತರಿಸಿದ್ದ ಜನರ ಮೈಮನಗಳಿಗೆ ತಂಪೆರೆಯಿತು. ಸಂಜೆ 6.45ರ ಸುಮಾರಿನಲ್ಲಿ ಇದ್ದಕ್ಕಿದ್ದಂತೆ ಎದ್ದ ಬಿರುಗಾಳಿ ನಗರದ ಹಲವು ಬಡಾವಣೆಗಳಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತು. ದ್ವಿಚಕ್ರ ವಾಹನ ಸವಾರರು ಭಯಭೀತರಾಗಿ ರಸ್ತೆಯಲ್ಲೇ ವಾಹನ ನಿಲ್ಲಿಸಿ ರಕ್ಷಣೆಗೆಂದು ಸಮೀಪದ ಕಟ್ಟಡಗಳ ಕಡೆಗೆ ತೆರಳಿ ಆಶ್ರಯಿಸಿದರು. ಕೇವಲ ಹತ್ತು ನಿಮಿಷಗಳ ಕಾಲ ಆರ್ಭಟಿಸಿದ ಮಳೆಯಿಂದ ನಗರ ತಂಪಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!