ದೇಶದಲ್ಲಿ ಮತ್ತೊಂದು ಶಂಕಿತ ‘ಮಂಕಿಪಾಕ್ಸ್‌’ ಪ್ರಕರಣ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಬಿಹಾರದಲ್ಲಿ ಮಂಕಿಪಾಕ್ಸ್ ಮೊದಲ ಶಂಕಿತ ಪ್ರಕರಣ ದಾಖಲಾಗಿದೆ. ಈ ಮೂಲಕ ದೇಶದಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.
ಶಂಕಿತ ಮಹಿಳೆ ಪಾಟ್ನಾ ನಗರವಾಸಿ ಎಂದು ತಿಳಿದು ಬಂದಿದೆ. ರೋಗಿಯ ರಕ್ತರ ಮಾದರಿಯನ್ನು ಪರೀಕ್ಷೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.
ಶಂಕಿತ ಮಹಿಳೆ ಎಂದು ಪಾಟ್ನಾ ಸಿವಿಲ್ ಸರ್ಜನ್ ತಿಳಿಸಿದ್ದಾರೆ. ತನಿಖೆಗಾಗಿ 4 ಜನರ ತಂಡವನ್ನು ಮಾಡಿ ಅವರ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬಿಹಾರ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ ಎಂದು ಆರೋಗ್ಯ ಸಚಿವ ಮಂಗಲ್ ಪಾಂಡೆ ಹೇಳಿದ್ದಾರೆ.
ಈ ನಡುವೆ ಜಿಲ್ಲೆಗಳ ಸಿವಿಲ್ ಸರ್ಜನ್‌ಗಳು ಮತ್ತು ವೈದ್ಯಕೀಯ ಕಾಲೇಜುಗಳ ಅಧೀಕ್ಷಕರೊಂದಿಗೆ ಸಚಿವರು ಸಭೆ ನಡೆಸಿ, ಮಾರ್ಗಸೂಚಿಗಳನ್ನು ಅನುಸರಿಸಲು ಸೂಚನೆಗಳನ್ನು ನೀಡಿದ್ದಾರೆ.
ಯಾವುದೇ ಶಂಕಿತರು ಕಂಡುಬಂದರೆ, ಪರೀಕ್ಷೆಯನ್ನು ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮಾದರಿಯನ್ನು ಪರೀಕ್ಷೆಗಾಗಿ ಪುಣೆಗೆ ಕಳುಹಿಸಬೇಕಾಗುತ್ತದೆ. ಸಿವಿಲ್ ಸರ್ಜನ್‌ಗಳು ಬ್ಲಾಕ್‌ನ ವೈದ್ಯಕೀಯ ಅಧಿಕಾರಿಗಳಿಗೂ ಎಚ್ಚರಿಕೆ ನೀಡುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ಮಂಗಲ್ ಪಾಂಡೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!