Tuesday, March 28, 2023

Latest Posts

ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್​ ಪಂದ್ಯ: ಮೊದಲ ದಿನದಾಟದ ಅಂತ್ಯಕ್ಕೆ ಭಾರತ 357/6

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಪ್ರವಾಸಿ ಶ್ರೀಲಂಕಾ ನಡುವೆ ಮೊದಲ ಟೆಸ್ಟ್​ ಪಂದ್ಯದ ಮೊದಲ ದಿನ ಆಟದ ಅಂತ್ಯದಲ್ಲಿ ಭಾರತ 6 ವಿಕೆಟ್ ​ನಷ್ಟಕ್ಕೆ 357ರನ್​ಗಳಿಕೆ ಮಾಡಿದೆ.
ಟಾಸ್​ ಗೆದ್ದು ಬ್ಯಾಟಿಂಗ್ ನಡೆಸುತ್ತಿರುವ ರೋಹಿತ್ ಪಡೆ , ಕನ್ನಡಿಗ ಮಯಾಂಕ್​ ಅಗರವಾಲ್​​ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದರು. 29ರನ್​ಗಳಿಕೆ ಮಾಡಿದ್ದ ಕ್ಯಾಪ್ಟನ್ ರೋಹಿತ್​​​ ಲಾ ವಿಕೆಟ್ ಒಪ್ಪಿಸಿದ್ರೆ, ಇದರ ಬೆನ್ನಲ್ಲೇ ಮಯಾಂಕ್​​ 33ರನ್​ಗಳಿಸಿ ಔಟಾದರು.
ಚೇತೇಶ್ವರ ಪೂಜಾರಿ ಜಾಗದಲ್ಲಿ ಸ್ಥಾನ ಪಡೆದುಕೊಂಡು ಬ್ಯಾಟ್ ಬೀಸಿದ ಹನುಮ ವಿಹಾರಿ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿದರು. ಮಾಜಿ ಕ್ಯಾಪ್ಟನ್ ವಿರಾಟ್​ ಜೊತೆ ಸೇರಿ 58ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ಮತ್ತೊಂದೆಡೆ 100ನೇ ಟೆಸ್ಟ್​​ ಪಂದ್ಯವನ್ನಾಡಿದ ವಿರಾಟ್​​ 45 ರನ್​ಗಳಿಸಿ ವಿಕೆಟ್​ ಒಪ್ಪಿಸಿದರು.
ವಿರಾಟ್​ ವಿಕೆಟ್ ಪತನವಾಗ್ತಿದ್ದಂತೆ ಮೈದಾನಕ್ಕೆ ಬಂದ ವಿಕೆಟ್ ಕೀಪರ್ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. 97 ಎಸೆತಗಳಲ್ಲಿ 4 ಸಿಕ್ಸರ್​, 9 ಬೌಂಡರಿ ಸೇರಿದಂತೆ 96ರನ್​ಗಳಿಕೆ ಮಾಡಿ ಲಕ್ಮಲ್ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ರಹಾನೆ ಸ್ಥಾನದಲ್ಲಿ ಅವಕಾಶ ಪಡೆದು ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್​ 27ರನ್​ಗಳಿಗೆ ಔಟಾದರು.
ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡ ಜಡೇಜಾ-ಅಶ್ವಿನ್​:
45ರನ್​ಗಳಿಕೆ ಮಾಡಿರುವ ಆಲ್​ರೌಂಡರ್ ರವೀಂದ್ರ ಜಡೇಜಾ ಹಾಗೂ 10ರನ್​ಗಳಿಕೆ ಮಾಡಿರುವ ರವಿಚಂದ್ರನ್​ ಅಶ್ವಿನ್ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಶ್ರೀಲಂಕಾ ಪರ ಲಸಿಂತ್ 2 ವಿಕೆಟ್​ ಪಡೆದುಕೊಂಡಿದ್ದು, ಉಳಿದಂತೆ ಲಕ್ಮಲ್​, ಫರ್ನಾಡೋ,ಲಾಹೀರು ಕುಮಾರ್ ಹಾಗೂ ಸಿಲ್ವಾ ತಲಾ 1ವಿಕೆಟ್​ ಕಬಳಿಕೆ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!