ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ಮೊದಲ ವಿಡಿಯೋ ಹೊರಬಿದ್ದಿದೆ. ಕಾರ್ಮಿಕರೆಲ್ಲರೂ 6 ಇಂಚಿನ ಪೈಪ್‌ಲೈನ್ ಅಡಿಯಲ್ಲಿ ವಾಸಿಸುತ್ತಿದ್ದಾರೆ. ಮೊದಲ ಬಾರಿಗೆ ಈ ಪೈಪ್ ಮೂಲಕ ಕಾರ್ಮಿಕರಿಗೆ ಬಿಸಿ ಆಹಾರವನ್ನು ಕಳುಹಿಸಲಾಯಿತು. 10ದಿನಗಳ ಸುರಂಗದ ಅವಶೇಷಗಳಡಿ ಸಿಲುಕಿದರರೂ ಕಾರ್ಮಿಕರು ಆರೋಗ್ಯವಾಗಿರುವುದೇ ಸಂತಸದ ವಿಷಯ.
ರಕ್ಷಣಾ ತಂಡವು ಹೊಸ ಪೈಪ್‌ಲೈನ್ ಸಹಾಯದಿಂದ ಕ್ಯಾಮೆರಾವನ್ನು ಕಳುಹಿಸಿದೆ. ಅದರ ಮೂಲಕ ಹೊರಗೆ ಅಳವಡಿಸಿರುವ ಪರದೆಯಲ್ಲಿ ಪ್ರತಿ ಕ್ಷಣವನ್ನು ಮೇಲ್ವಿಚಾರಣೆ ಮಾಡಬಹುದು. ಮೊದಲ ವೀಡಿಯೊದಲ್ಲಿ ಒಳಗೆ ಸಾಕಷ್ಟು ಬೆಳಕು ಇದೆ ಎಂದು ತೋರುತ್ತಿದೆ. ಎಲ್ಲ ಕೆಲಸಗಾರರು ಕ್ಯಾಮರಾ ಮುಂದೆ ನಿಂತು ವಾಕಿಟಾಕಿ ಮೂಲಕ ಮಾತನಾಡುತ್ತಿದ್ದಾರೆ. ಎಲ್ಲಾ ಕಾರ್ಮಿಕರು ಸಂಪೂರ್ಣವಾಗಿ ಫಿಟ್ ಆಗಿ ಕಾಣುತ್ತಿದ್ದಾರೆ.
VIDEO | First visuals of workers stuck inside the collapsed Silkyara tunnel in #Uttarkashi, Uttarakhand.
Rescuers on Monday pushed a six-inch-wide pipeline through the rubble of the collapsed tunnel allowing supply of larger quantities of food and live visuals of the 41 workers… pic.twitter.com/mAFYO1oZwv
— Press Trust of India (@PTI_News) November 21, 2023
ರಾತ್ರಿ ಕಿಚಿಡಿ, ಬೆಳಗ್ಗೆ ಬಿಸಿಯೂಟ
10 ದಿನದಿಂದ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರಿಗೆ ಸೋಮವಾರ ರಾತ್ರಿ ಪೈಪ್‌ಗಳ ಮೂಲಕ ಕಿಚಡಿಯನ್ನು ಬಾಟಲಿಗಳಲ್ಲಿ ತುಂಬಿ ಕಳುಹಿಸಲಾಗಿದೆ. ಅವರಿಗಾಗಿ ಬೆಳಗ್ಗೆ ಬಿಸಿ ತಿಂಡಿಯನ್ನೂ ತಯಾರಿಸಲಾಗಿತ್ತು. ಕಾರ್ಮಿಕರಿಗೆ ಮೊಬೈಲ್ ಫೋನ್ ಮತ್ತು ಚಾರ್ಜರ್‌ಗಳಂತಹ ಉಪಯುಕ್ತ ವಸ್ತುಗಳನ್ನು ಸಹ ಪೂರೈಸಲಾಯಿತು.
ಸ್ಥಳಕ್ಕೆ ಬಂದ ದೊಡ್ಡ ಡ್ರಿಲ್ಲಿಂಗ್ ಮೆಷಿನ್
ಸುರಂಗ ಮಾರ್ಗದ ಸ್ಥಳಕ್ಕೆ ದೊಡ್ಡ ಕೊರೆಯುವ ಯಂತ್ರವೂ ಬಂದಿದೆ. ಅದರ ಸಹಾಯದಿಂದ ಮೇಲಿನಿಂದ ಸುರಂಗವನ್ನು ಕೊರೆಯಲಾಗುತ್ತದೆ. ಕಾರ್ಮಿಕರನ್ನು ಸ್ಥಳಾಂತರಿಸಲು ಐದು ಕ್ರಿಯಾ ಯೋಜನೆಗಳನ್ನು ಏಕಕಾಲದಲ್ಲಿ ಸಿದ್ಧಪಡಿಸಲಾಗುತ್ತಿದೆ. ಆ ಯಂತ್ರದ ಮೂಲಕ ಕಬ್ಬಿಣದ ಪೈಪ್ ಅಳವಡಿಸುವ ಪ್ರಯತ್ನ ನಡೆಯುತ್ತಿದೆ.