ಐಪಿಎಲ್ ನಲ್ಲಿ RCBಗೆ ಮೊದಲ ಜಯ: ವಿಡಿಯೋ ಕಾಲ್ ಮಾಡಿ ಯಾರೊಂದಿಗೆ ಮಾತಾಡ್ತಿದ್ರು ಕೊಹ್ಲಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊದಲ ಪಂದ್ಯದಲ್ಲಿ ಸೋತ ಆರ್‌ಸಿಬಿ ಎರಡನೇ ಪಂದ್ಯದಲ್ಲಿ ಗೆದ್ದು ತನ್ನ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ತವರಿನಲ್ಲಿ 4 ವಿಕೆಟ್‌ಗಳ ರೋಚಕ ಗೆಲುವು ಪಡೆದ ಆರ್‌ಸಿಬಿ ಈ ಖುಷಿಯ ಕ್ಷಣವನ್ನು ಹಂಚಿಕೊಳ್ಳಲು ಕಿಂಗ್ ಕೊಹ್ಲಿ, ಅನುಷ್ಕಾ ಅವರಿಗೆ ವಿಡಿಯೋ ಕಾಲ್ ಮಾಡುವ ಮೂಲಕ ತಮ್ಮ ಮೊದಲ ಗೆಲುವಿನ ಸಂಭ್ರಮವನ್ನು ಆಚರಿಸಿದ್ದಾರೆ, ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

VIDEO - Virat Kohli Video Calls Anushka Sharma, Vamika And Akaay After RCB's Win

ನಿನ್ನೆ ಪಂಜಾಬ್ ವಿರುದ್ಧ ವಿರಾಟ್ ಅದ್ಭುತ ಆಟವಾಡಿದರು. ಅರ್ಧ ಶತಕ ಬಾರಿಸುವ ಮೂಲಕ ಕೊಹ್ಲಿ 49 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 77 ರನ್ ಗಳಿಸಿದ್ದರು.

ಕೊಹ್ಲಿ ಔಟಾದ ಬಳಿಕ ದಿನೇಶ್ ಕಾರ್ತಿಕ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೊನೆಯ ಎರಡು ಓವರ್‌ಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಗಳಿಸುವ ಮೂಲಕ ಆರ್‌ಸಿಬಿ ತನ್ನ ಮೊದಲ ಗೆಲುವು ಸಾಧಿಸಿತು.

ಗೆಲುವಿನ ಖುಷಿಯಲ್ಲಿದ್ದ ಕೊಹ್ಲಿ ಮೈದಾನದಲ್ಲಿ ನಿಂತು ಪತ್ನಿ ಅನುಷ್ಕಾಗೆ ವಿಡಿಯೋ ಕಾಲ್ ಮಾಡಿದ್ದಾರೆ. ಕಿಂಗ್ ಕೊಹ್ಲಿ ಅನುಷ್ಕಾ ಶರ್ಮಾಗೆ ಕರೆ ಮಾಡಿ ಪ್ಲೇನ್ ಕಿಸ್ ನೀಡುತ್ತಿರುವ ದೃಶ್ಯ ಕೂಡ ಅಭಿಮಾನಿಗಳ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೊಹ್ಲಿ ತಮ್ಮ ಮಗಳೊಂದಿಗೆ ಕೂಡ ವಿಡಿಯೋ ಕಾಲ್ ನಲ್ಲಿ ಕೊಹ್ಲಿ ಮಾತನಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!