October 4, 2026
Sunday, October 4, 2026
spot_img

ಬೆಳಗಾವಿಯಲ್ಲಿ ಬಿಸಿಲಿನ ಝಳಕ್ಕೆ ಮೀನುಗಳ ಮಾರಣಹೋಮ

ಹೊಸದಿಗಂತ ವರದಿ, ಬೆಳಗಾವಿ:

ದಿನದಿಂದ ದಿನಕ್ಕೆ ಬಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಕೆರೆಯಲ್ಲಿ ನೂರಾರು ಮೀನುಗಳು ಸತ್ತು ತೇಲಾಡುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.

ಚಿಕ್ಕಬಾಗೇವಾಡಿ ಗ್ರಾಮದ ನಿವಾಸಿ ಶಂಕರಗೌಡ ಪಾಟೀಲ ಎಂಬುವವರು ತಮ್ಮ ಜಮಿನಿನ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಿಕೊಂಡು ಜಮ್ಮ ಜೀವನವನ್ನು ಕಟ್ಟಿಕೊಂಡಿದ್ದರು. ಬಿಲಿಸಿ ತಾಪಮಾನಕ್ಕೆ ಸಾವಿರಾರು ಮೀನುಗಳು ಸಾವನಪ್ಪಿದ್ದು, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ 50 ಸಾವಿರ ಮೀನು ಬಿಟ್ಟಿದ್ದ ಮಾಲೀಕನು ಆಘಾತಗೊಂಡಿದ್ದಾನೆ.

ವಿಪರಿತ ಬಿಸಿಲಿನಿಂದ ಕೆರೆಯ ನೀರು ಬತ್ತಿ ಬಿಸಿಲಿನ ಝಳಕ್ಕೆ ಸಾವಿರಾರು ಮೀನುಗಳ ಸಾಮೂಹಿಕ ಸಾವನಪ್ಪಿದ್ದಾವೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.


ಬೇಸಿಗೆ ಆರಂಭದಲ್ಲೇ ಮೀನು ಸಾಕಾಣಿಕೆದಾರರಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿದೆ, ಸಾವಿರಾರು ಮೀನುಗಳ ಸಾವಿನ ಬಗ್ಗೆ ಮಿಣುಗಾರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು, ಹಾಗೂ ರಾಜ್ಯ ಸರ್ಕಾರ ಕೂಡಲೇ ಮೀನು ಸಾಗಾಣಿಕೆ ದಾರರಿಗೆ ಸೂಕ್ತ ಪರಿಹಾರ ನೀಡಿಬೇಕೆಂದು ಮೀನು ಸಾಗಾಣಿಗೆ ಶಂಕರಗೌಡ ಪಾಟೀಲ ಆಗ್ರಹಿಸಿದ್ದಾರೆ.

Must Read