Sunday, October 1, 2023

Latest Posts

ಯಮುನಾ ನದಿಯಲ್ಲಿ ಡಾಲ್ಫಿನ್ ಹಿಡಿದ ಮೀನುಗಾರರು:‌ ಓರ್ವನ ಬಂಧನ, ಉಳಿದವರಿಗಾಗಿ ಶೋಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಮುನಾ ನದಿಯ ಪ್ರವಾಹದಲ್ಲಿ ಕೊಚ್ಚಿಬಂದ ಡಾಲ್ಫಿನ್ ಹಿಡಿದು ತಿಂದ ನಾಲ್ವರು ಮೀನುಗಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯಮುನಾ ನದಿ ಪ್ರವಾಹದ ವೇಳೆ ಮೀನುಗಾರಿಕೆಗೆ ತೆರಳಿದ್ದ ನಾಲ್ವರು ಮೀನುಗಾರರ ಬಲೆಗೆ ಡಾಲ್ಫಿನ್ ಮೀನು ಸಿಕ್ಕಿದೆ.  ಬಲೆಯಲ್ಲಿ ಸಿಲುಕಿದ ಡಾಲ್ಫಿನ್ ಅನ್ನು ಮೀನುಗಾರರು ಹೆಗಲ ಮೇಲೆ ಹೊತ್ತು ಮನೆಗೆ ಸಾಗಿಸಿ, ಅಡುಗೆ ಮಾಡಿ ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಸೀರ್‌ಪುರ ಗ್ರಾಮದ ನಾಲ್ವರು ಮೀನುಗಾರರು ಜುಲೈ 22ರಂದು ಬೆಳಗ್ಗೆ ಯಮುನಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಡಾಲ್ಫಿನ್‌ ಬಲೆಗೆ ಸಿಲುಕಿದ್ದು, ಅದನ್ನು ತಿಂದಿರುವುದಾಗಿ ಎಸ್‌ಎಚ್‌ಒ ಶ್ರವಣ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ. ಅರಣ್ಯ ರಕ್ಷಕ ರವೀಂದ್ರಕುಮಾರ್ ನೀಡಿದ ದೂರಿನ ಮೇರೆಗೆ ಡಾಲ್ಫಿನ್ ಅಡುಗೆ ಮಾಡಿದ ಮೀನುಗಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಓರ್ವನನ್ನು ಬಂಧಿಸಿದ್ದಾರೆ.

ಕೆಲವು ದಾರಿಹೋಕರು ಮೀನುಗಾರರು ಡಾಲ್ಫಿನ್ ಅನ್ನು ಹೊತ್ತೊಯ್ಯುತ್ತಿರುವುದನ್ನು ಚಿತ್ರೀಕರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಯ ದೂರಿನ ಮೇರೆಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ (1972) ಅಡಿಯಲ್ಲಿ ರಂಜೀತ್ ಕುಮಾರ್, ಸಂಜಯ್, ದಿವಾನ್ ಮತ್ತು ಬಾಬಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಂಜಿತ್ ಕುಮಾರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಉಳಿದ ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!