MUST READ | ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಿದಷ್ಟೂ ನೆಮ್ಮದಿಯಾಗಿರ‍್ತೀರಿ.. ಇದನ್ನು ಬಿಡೋದು ಹೇಗೆ?

ಸಾಮಾಜಿಕ ಜಾಲತಾಣಗಳಿಲ್ಲದೆ ಏನೂ ಇಲ್ಲ. ಹೊರಗೆ ಹೋಗೋ ಮನಸ್ಸಿಲ್ಲ ಆದರೆ ಹೊಸತೊಂದು ಫೋಟೊಗೋಸ್ಕರ ಹೊರಗೆ ಹೋಗುವ ಮನಸ್ಸು ಮಾಡುತ್ತೀರಿ. ಬಿಸಿಬಿಸಿ ತಿನ್ನೋದು ಬಿಟ್ಟು ಸ್ಟೋರಿ ಹಾಕಬೇಕು ಎಂದು ಊಟವನ್ನು ಕಾಯಿಸ್ತೀರಿ, ಪರಿಚಯವೇ ಇಲ್ಲದ ಯಾರೋ ಹಾಕಿದ ಕಮೆಂಟ್‌ಗೆ ತಲೆಕೆಡಿಸಿಕೊಳ್ತೀರಿ, ಗೆಳೆಯರು ಫೋಟೊ ಟ್ಯಾಗ್ ಮಾಡಿಲ್ಲ ಎಂದರೆ ಸಿಟ್ಟಾಗ್ತೀರಿ.

ರಾತ್ರಿ ಮಲಗುವಾಗ ದೇವರ ಫೋಟೊ ನೋಡ್ತೀರೋ ಇಲ್ವೋ ಆದರೆ ಮೊಬೈಲ್ ನೋಡೋದು ಪಕ್ಕಾ! ಇನ್ನು ಬೆಳಗ್ಗೆ ಎದ್ದರೂ ದೇವರ ಫೋಟೊ ನೋಡೋದಿಲ್ಲ ಮೊದಲು ನೋಡೋದ ಮೊಬೈಲ್‌ನ್ನು, ಮೊಬೈಲ್ ಅಂದ್ರೆ ಇನ್ನೇನು ಸಾಮಾಜಿಕ ಜಾಲತಾಣಗಳ ಡಸ್ಟ್‌ಬಿನ್!

ಕೆಲವರಿಗೆ ತಾವು ಅತಿಯಾಗಿ ಸಾಮಾಜಿಕ ಜಾಲತಾಣ ಬಳಕೆ ಮಾಡ್ತಿದ್ದೀವಿ ಅನ್ನೋ ಮಾಹಿತಿ ಇದೆ, ಆದರೆ ಬಿಡೋಕಾಗ್ತಿಲ್ಲ, ಯಾಕಂದ್ರೆ ಅಭ್ಯಾಸ ಆಗೋಗಿದೆ ಅಲ್ವಾ!
ಈ ರೀತಿ ಇಷ್ಟ ಇದ್ದು ಸಾಮಾಜಿಕ ಜಾಲತಾಣಗಳು, ಮೊಬೈಲ್‌ಗಳ ಬಳಕೆಯನ್ನು ಕಡಿಮೆ ಮಾಡೋಕೆ ಕೆಲವು ಟಿಪ್ಸ್ ಇಲ್ಲಿದೆ..

  • ಸಂಪೂರ್ಣವಾಗಿ ಮೊಬೈಲ್ ಬಿಟ್ಟುಬಿಡೋದು ಕಷ್ಟ. ಸಮಯ ನಿಗದಿ ಮಾಡಿಕೊಳ್ಳಿ, ಮಕ್ಕಳ ರೀತಿ ಸ್ಕ್ರೀನ್ ಟೈಮ್ ಸ್ಟ್ರಿಕ್ಟ್ ಆಗಿರಲಿ.
  • ಫೇಸ್‌ಬುಕ್, ಇನ್ಸ್ಟಾಗ್ರಾಮ್, ಸ್ನಾಪ್‌ಚಾಟ್ ಹೀಗೆ ಸಾಕಷ್ಟು ಆಪ್ ನಿಮ್ಮ ಬಳಿ ಇದ್ದರೆ ಒಂದೊಂದೆ ಆಪ್‌ಗೆ ಗುಡ್ ಬೈ ಹೇಳಿ. ಒಂದನ್ನು ಮಾತ್ರ ಇಟ್ಟುಕೊಳ್ಳಿ.
  • ಆರೋಗ್ಯಕರ ಅಭ್ಯಾಸಗಳನ್ನು ರೂಢಿ ಮಾಡಿ, ಮೊಬೈಲ್ ನೋಡೋಕಾಗಷ್ಟು ಬ್ಯುಸಿ ಆಗಿ. ಸ್ವಿಮ್ಮಿಂಗ್ ಕ್ಲಾಸ್, ಮ್ಯೂಸಿಕ್ ಕ್ಲಾಸ್, ಜಿಮ್ ಹೀಗೆ ನಿಮ್ಮನ್ನು ನೀವು ಬ್ಯುಸಿಯಾಗಿ ಇಟ್ಟುಕೊಳ್ಳಿ
  • ಬೇಸರದಲ್ಲಿದ್ದಾಗ, ಅತೀ ಖುಷಿಯಾಗಿದ್ದಾಗ ಸಾಮಾಜಿಕ ಜಾಲತಾಣಕ್ಕೆ ಮೊರೆ ಹೋಗಬೇಡಿ
  • ಪುಸ್ತಕಕ್ಕಿಂತ ಉತ್ತಮ ಮಿತ್ರ ಬೇಕಾ? ಫೋನ್ ಎಸೆದು ಪುಸ್ತಕಗಳ ಕಡೆ ಮುಖ ಮಾಡಿ
  • ನೋಟಿಫಿಕೇಶನ್‌ಗಳನ್ನು ಆಫ್ ಮಾಡಿಕೊಳ್ಳಿ, ಯಾವುದೋ ಮುಖ್ಯವಾದ ಕೆಲಸದಲ್ಲಿರ‍್ತೀರಿ, ನಿಮ್ಮ ಮನಸ್ಸನ್ನು ಹಾಳುಮಾಡುವ ನೋಟಿಫಿಕೇಶನ್ ಸಿಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!