Sunday, December 3, 2023

Latest Posts

ಮೀನುಗಾರರ ಬಲೆಗೆ ಬಿದ್ದ ಉದ್ದನೆಯ ಕಣ್ಣಿನ ರಚನೆ ಹೊಂದಿರುವ ಅಪರೂಪದ ಏಡಿ!

ಹೊಸ ದಿಗಂತ ವರದಿ, ಕಾರವಾರ:

ಉದ್ದನೆಯ ಕಣ್ಣಿನ ರಚನೆ ಹೊಂದಿರುವ ಅಪರೂಪದ ಏಡಿಯೊಂದು ಕಾರವಾರ ಮಾಜಾಳಿ ಕಡಲ ತೀರದಲ್ಲಿ ಮೀನುಗಾರರ ಬಲೆಗೆ ದೊರಕಿದೆ.
ಕಾರವಾರದ ಕಡಲ ಜೀವ ವಿಜ್ಞಾನ ಕೇಂದ್ರದ ಪ್ರಾದ್ಯಾಪಕ ಡಾ.ಶಿವಕುಮಾರ ಹರಗಿ ಈ ವಿಶೇಷ ಏಡಿಯ ಕುರಿತು ಮಾಹಿತಿ ಸಂಗ್ರಹಿಸಿದ್ದು ಇದರ ವೈಜ್ಞಾನಿಕ ಹೆಸರು ಸೂಡೊಪೊತಲಾಮಸ ವಿಜೆಲ್ ಎಂದು ಮಾಹಿತಿ ನೀಡಿದ್ದಾರೆ.
ಸಮುದ್ರದಲ್ಲಿ ಸಾರಾಗವಾಗಿ ಈಜುವ ಕಾಲಿನ ರಚನೆ ಹೊಂದಿರುವ ಈ ಏಡಿ ಪ್ರಭೇದ ಕೆಂಪು ಸಮುದ್ರ, ಹವಾಯಿ ದ್ವೀಪ, ಜಪಾನ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಏಷ್ಯಾ ದ್ವೀಪ ರಾಷ್ಟ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ.
ಭಾರತದ ಪೂರ್ವ ಕರಾವಳಿಯಲ್ಲಿ ಕೆಲವೊಮ್ಮೆ ಕಂಡು ಬಂದರೂ ಪಶ್ಚಿಮ ಕರಾವಳಿ ಕಡಲಲ್ಲಿ ಕಂಡು ಬಂದಿರುವುದು ತುಂಬಾ ಅಪರೂಪದ ಪ್ರಕರಣ ಎಂದೇ ಹೇಳಬಹುದು.
ಜಪಾನ್ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ಭಾಗಗಳಲ್ಲಿ ಈ ಏಡಿಯನ್ನು ಆಹಾರವಾಗಿ ಉಪಯೋಗಿಸಲಾಗುತ್ತಿದ್ದು ಹೆಚ್ಚಿನ ಮೌಲ್ಯ ಮತ್ತು ಭಾರೀ ಬೇಡಿಕೆ ಇದೆ ಎಂದು ತಿಳಿದು ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!