ಕಾಸರಕೋಡದಲ್ಲಿ ಮೀನುಗಾರಿಕೆ ನಿಲ್ಲಿಸಿ ಪ್ರತಿಭಟನೆ: ನ್ಯಾಯಕ್ಕಾಗಿ ಆಗ್ರಹ

ಹೊಸದಿಗಂತ ವರದಿ, ಹೊನ್ನಾವರ:

ಜಿಲ್ಲಾಡಳಿತ ಮತ್ತು ಸರ್ಕಾರ ಬಂದರು ನಿರ್ಮಾಣ ಕಂಪನಿಯವರ ಪರವಾದ ಧೋರಣೆ ತೋರುತ್ತಿದ್ದಾರೆ, ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮೀನುಗಾರರು ಕೆಲವು ದಿನಗಳ ಕಾಲಾವಕಾಶ ಕೇಳಿ ಮನವಿ ಮಾಡಿದರೂ ಅದಕ್ಕೆ ಸ್ಪಂದಿಸಲಾಗಿಲ್ಲ ಎಂದು ಮೀನುಗಾರರ ಮುಖಂಡ ರಾಮಾ ಮೋಗೆರ್ ಮತ್ತಿತರರು ಆರೋಪಿಸಿದರು .
ಮೀನುಗಾರರ ಮೇಲೆ ಬಲ ಪ್ರಯೋಗ ಮಾಡಿದಷ್ಟು ಸಂಘಟನೆ ಒಗ್ಗಟು ಹೆಚ್ಚಲಿದೆ, ಯಾವುದೇ ಕಾರಣವಿಲ್ಲದೇ ಮೀನುಗಾರರನ್ನು ಬಂಧಿಸಲಾಗಿದೆ 6 ತಿಂಗಳ ಮಗುವಿನ ತಾಯಿ ಸೇರಿದಂತೆ ಅನಾರೋಗ್ಯದಿಂದ ಇರುವ ಮಹಿಳೆಯರನ್ನು ಬಂಧಿಸಲಾಗಿದೆ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮೀನುಗಾರ ಮುಖಂಡರು ಆಗ್ರಹಿಸಿದ್ದಾರೆ.
ಕಾಸರಕೋಡದಲ್ಲಿ ಮೀನುಗಾರಿಕೆ ನಿಲ್ಲಿಸಿ ಪ್ರತಿಭಟನೆ ಆರಂಭಿಸಲಾಗಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!