October 14, 2026
Wednesday, October 14, 2026
spot_img

ಕಾರವಾರದ ಅಂಜದೀವ್ ಬಳಿ ಮುಳುಗಡೆಯಾದ ಮೀನುಗಾರಿಕೆಗೆ ಬೋಟ್: 25 ಜನ ಕಾರ್ಮಿಕರ ರಕ್ಷಣೆ

ಹೊಸದಿಗಂತ ವರದಿ ಕಾರವಾರ:

ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾದ ಘಟನೆ ತಾಲೂಕಿನ ಅಂಜದೀವ್ ಬಳಿ ಸಂಭವಿಸಿದ್ದು, ಬೋಟಿನಲ್ಲಿದ್ದ 25 ಜನ ಕಾರ್ಮಿಕರನ್ನು ಸಮೀಪದಲ್ಲಿದ್ದ 4 ಬೋಟುಗಳು ತೆರಳಿ ರಕ್ಷಣೆ ಮಾಡಿವೆ.

ಅಂಕೋಲಾ ತಾಲೂಕಿನ ಬೆಳಂಬಾರದ ನೀಲಕಂಠ ಖಾರ್ವಿ ಎನ್ನುವವರಿಗೆ ಸೇರಿದ್ದ ಶ್ರೀಮಾತಾ ಹೆಸರಿನ ಬೋಟ್‌ ನೀರಿನಲ್ಲಿ ಮುಳುಗಡೆಯಾಗಿದ್ದು, ಬೋಟಿನಲ್ಲಿದ್ದ ಮೀನುಗಾರಿಕೆ ಬಲೆ ಮತ್ತಿತರ ಸಲಕರಣೆಗಳು ಸಮುದ್ರ ಪಾಲಾಗಿವೆ.

ಬೋಟ್ ಮುಳುಗಡೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಅವಘಡದಿಂದ ಸುಮಾರು 75 ಲಕ್ಷಗಳಷ್ಟು ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಕೆಲವು ದಿನಗಳ ಹಿಂದೆ ಗೋಕರ್ಣದ ತದಡಿ ಬಳಿ ಎರಡು ಮೀನುಗಾರಿಕೆ ಬೋಟ್‌ಗಳು ಮುಳುಗಡೆಯಾಗಿ ಅಪಾರ ಹಾನಿ ಸಂಭವಿಸಿತ್ತು.

Must Read