July 23, 2026
Thursday, July 23, 2026
spot_img

Fitness Habit | 21 ದಿನಗಳಲ್ಲಿ ಹೆಲ್ದಿ ಹ್ಯಾಬಿಟ್ಸ್ ಬೆಳೆಸೋದು ಹೇಗೆ? ತುಂಬಾನೇ ಸಿಂಪಲ್ ಇದೆ ನೋಡಿ

“ನಾಳೆಯಿಂದ ಶುರು ಮಾಡ್ತೀನಿ” ಅನ್ನೋ ಮಾತು ಮಾಮೂಲಾಗಿ ಎಲ್ಲರು ಹೇಳ್ತಿವಿ. ಆದರೆ ಫಿಟ್ನೆಸ್ ಹ್ಯಾಬಿಟ್ ಬೆಳೆಸೋದು ಅಷ್ಟು ಕಷ್ಟವಲ್ಲ ಅದನ್ನು ಸಿಂಪಲ್ ಆಗಿ ಅರ್ಥ ಮಾಡ್ಕೊಂಡ್ರೆ ಸಾಕು. ಹಾಗಂತ 21 ದಿನಗಳಲ್ಲಿ ದೊಡ್ಡ ಟ್ರಾನ್ಸ್‌ಫಾರ್ಮೇಶನ್ ಆಗೋದಿಲ್ಲ, ಆದರೆ ನಿಮ್ಮ ಮನಸ್ಸು ಮತ್ತು ದೇಹ ಹೊಸ ರೂಟೀನ್‌ಗೆ ಸೆಟ್ ಆಗುತ್ತೆ.

ಹ್ಯಾಬಿಟ್ ಅಂದ್ರೆ ಡಿಸಿಪ್ಲಿನ್ ಅಲ್ಲ, ಪ್ಯಾಟರ್ನ್
ಪ್ರತಿದಿನ ಒಂದೇ ಸಮಯಕ್ಕೆ ಒಂದೇ ಕೆಲಸ ಮಾಡಿದ್ರೆ ಅದು ಸ್ವಾಭಾವಿಕವಾಗಿ ಹ್ಯಾಬಿಟ್ ಆಗುತ್ತದೆ. ಉದಾಹರಣೆಗೆ, ಬೆಳಗ್ಗೆ ಎದ್ದ ಕೂಡಲೇ 5 ನಿಮಿಷ ಸ್ಟ್ರೆಚಿಂಗ್ ಮಾಡೋದು ಇದನ್ನು ಮಿಸ್ ಮಾಡದೇ ಮಾಡಿದ್ರೆ ಅದು ಆಟೋಮ್ಯಾಟಿಕ್ ಆಗಿ ರೂಟೀನ್ ಆಗುತ್ತದೆ.

ಮೋಟಿವೇಷನ್ ಮೇಲೆ ಅವಲಂಬಿಸ್ಬೇಡಿ
ಪ್ರತಿ ದಿನ ಮೋಟಿವೇಟೆಡ್ ಫೀಲ್ ಆಗೋದು ಸಾಧ್ಯವಿಲ್ಲ. ಆದ್ದರಿಂದ “ಮೂಡ್ ಇದ್ದಾಗ ಮಾತ್ರ ಮಾಡ್ತೀನಿ” ಅನ್ನೋದನ್ನು ಬಿಡಿ. ಒಂದೇ ಸಮಯಕ್ಕೆ ಮಾಡ್ಲೆ ಬೇಕು ಅಂತ ಮಾಡಿ ಇದೇ ರಿಯಲ್ ಹ್ಯಾಬಿಟ್.

ಪರಿಸರವೇ ನಿಮ್ಮ ಹ್ಯಾಬಿಟ್ ನಿರ್ಧರಿಸುತ್ತದೆ
ಜಿಮ್ ಬಟ್ಟೆ ಮುಂದೆ ಇಟ್ಟುಕೊಳ್ಳಿ, ನೀರಿನ ಬಾಟಲ್ ಕಣ್ಣಿಗೆ ಕಾಣುವ ಜಾಗದಲ್ಲಿ ಇಡಿ. ಸುತ್ತಮುತ್ತಲಿನ ವಾತಾವರಣವೇ ನಿಮ್ಮನ್ನು ನೆನಪಿಸುತ್ತದೆ.

ಫಲಿತಾಂಶಕ್ಕಿಂತ ಕ್ರಿಯೆಗೆ ಫೋಕಸ್ ಮಾಡಿ
ತೂಕ ಎಷ್ಟು ಕಡಿಮೆಯಾಯಿತು ಅನ್ನೋದಕ್ಕಿಂತ, “ಇಂದು ನಾನು ವರ್ಕೌಟ್ ಮಾಡಿದೆನಾ?” ಅನ್ನೋದು ಮುಖ್ಯ. ಕ್ರಿಯೆ ನಿರಂತರವಾಗಿದ್ರೆ ಫಲಿತಾಂಶ ಸ್ವತಃ ಬರುತ್ತದೆ.

21 ದಿನಗಳ ಮ್ಯಾಜಿಕ್ ಏನು?
ಈ ಅವಧಿಯಲ್ಲಿ ನಿಮ್ಮ ಮೆದುಳು ಹೊಸ ಹವ್ಯಾಸವನ್ನು ಒಪ್ಪಿಕೊಳ್ಳಲು ಶುರು ಮಾಡುತ್ತದೆ. ಒಮ್ಮೆ ಅದು ರೂಟೀನ್ ಆಯ್ತು ಅಂದ್ರೆ, ಮಾಡೋದು ಕಷ್ಟ ಅನ್ನಿಸೋದಿಲ್ಲ.

ಫಿಟ್ನೆಸ್ ಸೀಕ್ರೆಟ್ ತುಂಬಾ ಸಿಂಪಲ್ ಸಣ್ಣದಾಗಿ ಶುರು ಮಾಡಿ, ಆದ್ರೆ ಪ್ರತಿದಿನ ಮಾಡ್ತಾ ಇರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !