ಹೊಸದಿಗಂತ ಡಿಜಿಟಲ್ ಡೆಸ್ಕ್:
ತರಬೇತಿ ವೇಳೆ ಯುದ್ಧ ವಿಮಾನ ಪತನಗೊಂಡು ಐವರು ಯುಎಸ್ ಯೋಧರು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಯುರೋಪಿಯನ್ ಕಮಾಂಡ್ ಹೇಳಿದೆ.
ಶುಕ್ರವಾರ ಸಂಜೆ ಅಮೆರಿಕದ ಬರ್ಲಿನ್‌ನಲ್ಲಿರುವ ಪೂರ್ವ ಮೆಡಿಟರೇನಿಯನ್ ಸಮುದ್ರದ ಮೇಲೆ ತರಬೇತಿಯ ಭಾಗವಾಗಿ ಆಗಸದಲ್ಲಿಯೇ ಇಂಧನ ತುಂಬುವ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ವಿಮಾನ ಪತನಗೊಂಡಿದೆ ಎಂದು ಅಮೆರಿಕದ ಯುರೋಪಿಯನ್ ಕಮಾಂಡ್ ತಿಳಿಸಿದೆ.
ವಿಮಾನದಲ್ಲಿದ್ದ ಐವರು ಯುಎಸ್ ಯೋಧರು ಸಾವನ್ನಪ್ಪಿದ್ದಾರೆ ಎಂದು ಕಮಾಂಡ್ ಮಾಹಿತಿ ನೀಡಿದೆ. ಇದಕ್ಕೂ ಮೊದಲು ಶನಿವಾರದಂದು ವಿಮಾನ ಪತನಗೊಂಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಶನಿವಾರ ಸಂಜೆ ಮೆಡಿಟರೇನಿಯನ್ ಸಮುದ್ರದ ಮೇಲೆ ನಡೆದ ಯುದ್ಧಾಭ್ಯಾಸ ತರಬೇತಿ ಸಂದರ್ಭ ಐವರು ಯೋಧರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸುತ್ತೇವೆ. ಈ ಘಟನೆಯ ಕುರಿತಾಗಿ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.