ದಿನಭವಿಷ್ಯ| ಮನದ ದುಗುಡ ಇಂದು ಮಾಯವಾಗುವ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಯಾವುದೇ ವಿಷಯವನ್ನು ಬರೀ ಭಾವನಾತ್ಮಕವಾಗಿ ನೋಡದಿರಿ. ಪ್ರಾಕ್ಟಿಕಲ್ ಆಗಿಯೂ ಯೋಚಿಸಿ. ಆಗ ಕಷ್ಟ, ನೋವು ಕಡಿಮೆ ಆಗುವುದು.

ವೃಷಭ
ಇತರರು ನಿಮ್ಮನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವರೊಡನೆ ಮುಕ್ತವಾಗಿ ವ್ಯವಹರಿಸಿ. ನಿಮ್ಮ ನಿಲುವು ಸ್ಪಷ್ಟಪಡಿಸಿ. ಮುಚ್ಚುಮರೆ ಬೇಡ.

ಮಿಥುನ
ಆಪ್ತರ ಜತೆ ಭಿನ್ನಮತ ಉಂಟಾದೀತು. ಆದರೆ ಅದು ಪರಿಹರಿಸಲು ಅಸಾಧ್ಯವೇನೂ ಅಲ್ಲ. ಮೊದಲಿಗೆ ಬಿಗುಮಾನ ಬಿಡಬೇಕು. ಪ್ರಾಂಜಲ ಮನಸ್ಥಿತಿ ಬೇಕು.

ಕಟಕ
ನೀವಿಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯದಲ್ಲಿ ನಿರತರಾಗುವ ಸಾಧ್ಯತೆ. ಋತುಸಂಬಂಧಿ ಕಾಯಿಲೆ ಕಾಡಬಹುದು. ಎಚ್ಚರ ವಹಿಸಿ.

ಸಿಂಹ
ಇಂದು ಸಮಸ್ಯೆ ಎಲ್ಲ ಪರಿಹಾರವಾದ ನಿರಾಳತೆ. ಆದರೆ ಹೊಸದಾಗಿ ಸಮಸ್ಯೆ ಹುಟ್ಟಿಕೊಂಡೀತು. ಆ ಕುರಿತಂತೆ ತುಸು ಎಚ್ಚರದಿಂದಿರಿ.

ಕನ್ಯಾ
ನೆರೆಮನೆಯವರ ಜತೆ ಸಣ್ಣ ವಿಷಯಕ್ಕೆ ಜಗಳ ಕಾಯಲು ಹೋಗದಿರಿ. ವಿವಾದದಿಂದ ದೂರವಿರಿ. ವೃತ್ತಿಯಲ್ಲಿ ಮಹತ್ವದ ನಿರ್ಧಾರ ತಾಳಬೇಕಾದ ಪರಿಸ್ಥಿತಿ.

ತುಲಾ
ಸಮಾನಮನಸ್ಕರ ಜತೆ ಹೆಚ್ಚು ಬೆರೆಯುವ ಅವಕಾಶ. ನಿಮ್ಮ ಸರಳ ನಡೆನುಡಿಯಿಂದಾಗಿ ಕೆಲಸಗಳೆಲ್ಲ ಸುಗಮ. ಮನೆಯಲ್ಲಿ ಹರ್ಷದ ವಾತಾವರಣ.

ವೃಶ್ಚಿಕ
ಮನದ ದುಗುಡ ಇಂದು ಮಾಯವಾಗಲಿದೆ. ಆರ್ಥಿಕ ಲಾಭ. ಅನಿರೀಕ್ಷಿತ ಧನಾಗಮ. ಬಂಧುಬಾಂಧವರ ಸಂಗದಲ್ಲಿ ಹರ್ಷದಿಂದ ಕಳೆಯುವಿರಿ.

ಧನು
ಕೌಟುಂಬಿಕವಾಗಿ ಸಂತೋಷದ ವಾತಾವರಣ. ಎಲ್ಲರಿಂದ ಸಹಕಾರ. ಕಾಡುತ್ತಿದ್ದ ಬೇಸರ ಮಾಯವಾಗುವುದು. ನಿರಾಳತೆ.

ಮಕರ
ಇತರರ ಕೆಲಸವನ್ನು ಟೀಕಿಸುವ ಕಾರ್ಯ ಮಾಡದಿರಿ. ಅದು ಬಿಕ್ಕಟ್ಟು ಸೃಷ್ಟಿಸಬಹುದು. ಆರೋಗ್ಯದ ಕುರಿತು ಗಮನ ಕೊಡಿ. ಖರ್ಚು ಹೆಚ್ಚಳ.

ಕುಂಭ
ಕೆಲವರ ಜತೆ ಹಠಮಾರಿಯಾಗಿ ವರ್ತಿಸುವಿರಿ. ಇದರಿಂದ ಸಂಬಂಧ ಕೆಡಬಹುದು. ಸಂಧಾನದ ದಾರಿ ಪರಿಸ್ಥಿತಿಯನ್ನು ತಿಳಿಗೊಳಿಸಬಹುದು.

ಮೀನ
ಕೆಲಸದ ಒತ್ತಡ ಕಡಿಮೆಯಾಗಿ ಮನಸ್ಸಿಗೆ ನಿರಾಳತೆ. ಆತ್ಮೀಯ ಬಂಧುಗಳ ಜತೆ ಕಾಲಕ್ಷೇಪ. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ಖರ್ಚು ಅಧಿಕ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!