ಹೊಸದಿಗಂತ ವರದಿ ವಿಜಯಪುರ:
ಐದು ಗ್ಯಾರಂಟಿಗಳು ಆಮ್ ಆದ್ಮಿ ಪಕ್ಷದಿಂದ ಕದ್ದಿದ್ದು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ನಿಭಾಯಿಸಲು ಕಾಂಗ್ರೆಸ್ ಸರ್ಕಾರಕ್ಕೆ ಆಗುತ್ತಿಲ್ಲ ಎಂದು ದೂರಿದರು.
ರಾಜ್ಯವನ್ನು ಸಾಲದಲ್ಲಿ ಸಿಲುಕಿಸಿ, ಮಕ್ಕಳು ಸಾಲಗಾರನ್ನಾಗಿ ಮಾಡುತ್ತೀರಾ ? ಒಂದೆಡೆಗೆ 200 ಯುನಿಟ್ ವಿದ್ಯುತ್ ಉಚಿತ ನೀಡಿ, ಮತ್ತೊಂದೆಡೆ ರೈತರಿಗೆ ಬರೆ ಎಳೆಯಗುತ್ತಿದೆ ಎಂದು ಕಿಡಿಕಾರಿದರು. ಇಂದು ಭ್ರಷ್ಟಾಚಾರ ರಹಿತ ಸರ್ಕಾರದ ಅವಶ್ಯಕತೆ ಇದೆ ಎಂಬುದನ್ನು ಒತ್ತಿ ಹೇಳಿದರು.