ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿವಿ ರಿಮೋಟ್ ವಿಚಾರಕ್ಕಾಗಿ ಅಣ್ಣ ತಮ್ಮನ ನಡುವೆ ನಡೆದ ಕಿತ್ತಾಟ ಜಗಳದಲ್ಲಿ ಅಂತ್ಯಗೊಂಡಿರುವ ಘಟನೆ ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ನಡೆದಿದೆ.
ಎನ್‌ಎಂಎಸ್ ಬಡಾವಣೆಯಲ್ಲಿ ಶನಿವಾರ ರಾತ್ರಿ ಟಿವಿ ರಿಮೋಟ್ ವಿಚಾರಕ್ಕೆ ಅಣ್ಣ ತಮ್ಮ ಜಗಳ ಮಾಡಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ತಂದೆ ತನ್ನ ಸ್ವಂತ ಮಗನ ಕುತ್ತಿಗೆಯನ್ನು ಕತ್ತರಿಯಿಂದ ಹಿರಿದು ಕೊಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಗ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಚಂದ್ರಶೇಖರ್ (16) ಮೃತ ದುರ್ದೈವಿ. ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ಪಿಎಸ್‌ಐ ಪಾಂಡುರಂಗಪ್ಪ ಮತ್ತು ರಾಂಪುರ ಪಿಎಸ್‌ಐ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಂದೆ ಲಕ್ಷ್ಮಣ ಬಾಬು ನನ್ನು ವಶಕ್ಕೆ ಪಡೆದಿದ್ದಾರೆ.