ಮನೆಯಲ್ಲಿ ಮಾಡಿದ ಟೀ ವಿಶವಾಗಿದ್ದು ಹೇಗೆ? ಟೀ ಕುಡಿದು ಮೃತಪಟ್ಟ ಕುಟುಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಹಿಳೆ ತನ್ನ ಅರಿವಿಲ್ಲದೆ ಮಾಡಿದ ತಪ್ಪಿಗೆ ತನ್ನ ಪತಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಐದು ಜೀವಗಳು ಬಲಿಯಾಗಿವೆ. ಟೀ ಪುಡಿ ಎಂದು ತಿಳಿದು ಬೆಳಗೆ ಸಿಂಪಡಿಸಲು ತಂದಿದ್ದ ಕೀಟನಾಶಕವನ್ನು ಹಾಕಿ ಚಹಾ ತಯಾರಿಸಿ ಮನೆ ಮಂದಿಗೆಲ್ಲ ಕೊಟ್ಟಿದ್ದಾರೆ. ಆ ಟೀ ಕುಡಿದು ಪತಿ, ಮಾವ ಹಾಗೂ ಇಬ್ಬರು ಮಕ್ಕಳು ಹಾಗೂ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಮೈನ್‌ಪುರಿಯ ನಾಗಲಾ ಕನ್ಹೈ ಎಂಬಲ್ಲಿ ನಡೆದಿದೆ. ಅತ್ಯಂತ ದಾರುಣ ಘಟನೆಯಿಂದ ಅಲ್ಲಿನ ಜನರನ್ನು ದುಃಖದಲ್ಲಿ ಮುಳುಗಿಸಿದೆ. ತನ್ನಿಂದಾಗಿಯೇ ತನ್ನ ಪತಿ, ಮಕ್ಕಳು ನನ್ನಿಂದ ದೂರವಾಗಿದ್ದಾರೆಂದು ಮಹಿಳೆ ರೋಧಿಸಿದರು.

ನಾಗಲಾ ಕನ್ಹೈ ಗ್ರಾಮದ ಶಿವಾನಂದನ ಪತ್ನಿ ಎಂದಿನಂತೆ ಟೀ ಮಾಡಿ ಮನೆಯವರಿಗೆಲ್ಲಾ ಕೊಟ್ಟದ್ದಾರೆ. ಶಿವಾನಂದನ್ (35), ಅವರ ಇಬ್ಬರು ಮಕ್ಕಳಾದ ಆರು ವರ್ಷದ ಶಿವಂಗ್ ಮತ್ತು ಐದು ವರ್ಷದ ದಿವ್ಯಾಂಶ್ ಜೊತೆಗೆ ಅವರ ಮಾವ ರವೀಂದ್ರಸಿಂಗ್ ಮತ್ತು ನೆರೆಹೊರೆಯವ 45 ವರ್ಷದ ಸೊಬ್ರಾನ್ ಎಂಬುವವರು ಟೀ ಕುಡಿದು ತೀವ್ರ ಅಸ್ವಸ್ಥರಾದರು. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು ಶಿವಾನಂದನ ತಂದೆ ರವೀಂದ್ರ ಸಿಂಗ್, ಮಕ್ಕಳಾದ ಶಿವಂಗ್ ಮತ್ತು ದಿವ್ಯಾಂಶ್‌ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಸೊಬ್ರಾನ್ ಮತ್ತು ಶಿವಾನಂದ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅಲ್ಲಿಂದ ಸೈಫಾಯಿ ಆಸ್ಪತ್ರೆಗೆ ಕರೆದೊಯ್ದರು ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.

ಪೊಲೀಸ್ ಅಧೀಕ್ಷಕ ಕಮಲೇಶ್ ದೀಕ್ಷಿತ್ ಅವರ ತನಿಖೆಯಿಂದ ಶಿವಾನಂದ್ ಅವರ ಪತ್ನಿ ಚಹಾದಲ್ಲಿ ಗದ್ದೆಗೆ ಸಿಂಪಡಿಸಿದ ಕೀಟನಾಶಕ ಪುಡಿಯನ್ನು ಟೀ ಪುಡಿ ಎಂದು ತಪ್ಪಾಗಿ ಭಾವಿಸಿ ಹಾಲಿಗೆ ಬೆರೆಸಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದರು. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!