ಹೊಸದಿಗಂತ ಡಿಜಿಟಲ್ ಡೆಸ್ಕ್ :
ಉತ್ತರ ನೆವಾಡಾ ಪರ್ವತ ಪ್ರದೇಶದಲ್ಲಿ ಸಂಭವಿಸಿದ ವೈದ್ಯಕೀಯ ವಿಮಾನ ಅಪಘಾತದಲ್ಲಿ ರೋಗಿ ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ.
ನೆವಾಡಾದ ಸ್ಟೇಜ್‌ಕೋಚ್ ಬಳಿ ರಾತ್ರಿ 9:15 ರ ಸುಮಾರಿಗೆ ಅಪಘಾತದ ಬಗ್ಗೆ ಅಧಿಕಾರಿಗಳಿಗೆ ಕರೆ ಬಂದವು ಎಂದು ಲಿಯಾನ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ. ಸ್ಥಳಕ್ಕೆ ಧಾವಿಸಿದ ಬಳಿಕ ಅವಶೇಷಗಳು ಕಂಡುಬಂದಿವೆ.
ಸ್ಟೇಜ್‌ಕೋಚ್, ಸುಮಾರು 2,500 ನಿವಾಸಿಗಳನ್ನು ಹೊಂದಿರುವ ಗ್ರಾಮೀಣ ಸಮುದಾಯದ ನೆಲೆಯಾಗಿದೆ. ಇದು ರೆನೊದಿಂದ ಆಗ್ನೇಯಕ್ಕೆ 45 ಮೈಲಿಗಳು (72 ಕಿಲೋಮೀಟರ್) ದೂರದಲ್ಲಿಇದೆ.
ವಿಮಾನ ಮತ್ತು ಹೆಲಿಕಾಪ್ಟರ್ ಮೂಲಕ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುವ ಕೇರ್ ಫ್ಲೈಟ್ ಅಪಘಾತದಲ್ಲಿ ಸತ್ತವರಲ್ಲಿ ಪೈಲಟ್, ಫ್ಲೈಟ್ ನರ್ಸ್, ಫ್ಲೈಟ್ ಪ್ಯಾರಾಮೆಡಿಕ್, ರೋಗಿ ಮತ್ತು ರೋಗಿಯ ಕುಟುಂಬದ ಸದಸ್ಯರು ಸೇರಿದ್ದಾರೆ ಎಂದು ತಿಳಿದುಬಂದಿದೆ.