Saturday, February 24, 2024

ದೇಶದಲ್ಲಿ ಮುಂದಿನ ತಿಂಗಳು ದಿನಕ್ಕೆ ಐದು ಲಕ್ಷ ಕೇಸ್, ಭೀತಿ ಬೇಡ, ಜಾಗರೂಕರಾಗಿರಿ : ಅಮೆರಿಕ ಆರೋಗ್ಯ ತಜ್ಞ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ದಿನಕ್ಕೆ ಈಗಾಗಲೇ ಒಂದು ಲಕ್ಷ ಕೇಸ್ ದಾಖಲಾಗುತ್ತಿದೆ. ಮುಂದಿನ ತಿಂಗಳು ಈ ಸಂಖ್ಯೆ 5 ಲಕ್ಷದಷ್ಟಿರಲಿದೆ ಎಂದು ಅಮೆರಿಕದ ಆರೋಗ್ಯ ತಜ್ಞರೊಬ್ಬರು ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಫೆಬ್ರವರಿಯಲ್ಲಿ ದಿನಕ್ಕೆ ಐದು ಲಕ್ಷ ಕೇಸ್ ದಾಖಲಾಗಲಿವೆ. ಒಮಿಕ್ರಾನ್ ಗಂಭೀರವಾದ ಸ್ವರೂಪ ಹೊಂದಿಲ್ಲ. ಜಾಗರೂಕತೆ ಮುಖ್ಯ ಅಷ್ಟೆ ಎಂದು ವಾಷಿಂಗ್ಟನ್ ಇನ್ಸ್‌ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ನಿರ್ದೇಶಕ ಡಾ.ಕ್ರಿಸ್ಟೋಫರ್ ಮುರ್ರ‍್ರೆ ಹೇಳಿದ್ದಾರೆ.

ಒಮಿಕ್ರಾನ್ ಬಗ್ಗೆ ಹೆದರುವ ಅವಶ್ಯ ಇಲ್ಲ. ಇದು ಸೌಮ್ಯ ಸ್ವರೂಪ ಹೊಂದಿದೆ. ಆಸ್ಪತ್ರೆಗೆ ದಾಖಲಾಗುವ ಮತ್ತು ಮರಣ ಹೊಂದುವವರ ಸಂಖ್ಯೆ ಅತಿ ವಿರಳವಾಗಿದೆ. ಆದರೆ ಕೋವಿಡ್ ನಿರ್ಲಕ್ಷ್ಯ ಮಾಡುವಂತಿಲ್ಲ, ಭೀತಿಯೂ ಅನಾವಶ್ಯಕ. ಜಾಗರೂಕರಾಗಿದ್ದು, ಕೊರೋನಾ ನಿಯಮಗಳನ್ನು ಪಾಲಿಸಿ ಎಂದಿದ್ದಾರೆ.
ಭಾರತದಲ್ಲಿ ಕೋವಿಡ್ ಪ್ರಕರಣಗಳು ಆತಂಕಕಾರಿ ಸಂಖ್ಯೆಯಲ್ಲಿದ್ದು, ಕಟ್ಟುನಿಟ್ಟಿನ ಕ್ರಮ ಜಾರಿಮಾಡಲಾಗಿದೆ. ವೀಕೆಂಡ್ ಕರ್ಫ್ಯೂ ಸೇರಿ ಅನೇಕ ನಿರ್ಬಂಧಗಳನ್ನು ಹೇರಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!