ಜೈಪುರದಲ್ಲಿ ದಾರುಣ ಘಟನೆ: ವರದಕ್ಷಿಣೆ ಕಿರುಕುಳಕ್ಕೆ 27ದಿನದ ಮಗುವಿನೊಂದಿಗೆ ಐವರು ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಒಂದೇ ಕುಟುಂಬಕ್ಕೆ ಸೇರಿದ ಮೂವರು ಸೊಸೆಯೊಂದಿರು ಬಲವಂತವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮೂವರಲ್ಲಿ ಇಬ್ಬರು ಗರ್ಭಿಣಿಯಾಗಿರುವ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ. ಮತ್ತೊಂದೆಡೆ, ಮೃತಪಟ್ಟ ಇಬ್ಬರು ಮಕ್ಕಳಲ್ಲಿ ಒಂದು 4 ವರ್ಷದ ಬಾಲಕ ಮತ್ತು ಇನ್ನೊಂದು 27 ದಿನದ ಮಗು. ಅವರ ಆತ್ಮಹತ್ಯೆಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಜೈಪುರ ಜಿಲ್ಲೆಯ ಚಾಪಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂದೇ ಕುಟುಂಬದ ಮೂವರು ಸಹೋದರರನ್ನು ಮದುವೆಯಾಗಿದ್ದ ಮಹಿಳೆಯರು ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಶನಿವಾರ ಅವರ ಶವಗಳು ಬಾವಿಯಲ್ಲಿ ತೇಲುತ್ತಿರುವುದನ್ನು ಕಂಡು ವಿಷಯವನ್ನು ಹೆಣ್ಣುಮಕ್ಕಳ ಪೋಷಕರಿಗೆ ತಿಳಿಸಿದ್ದಾರೆ. ಘಟನೆ ಕುರಿತು ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ವರದಕ್ಷಿಣೆಗಾಗಿ ತಮ್ಮ ಅಳಿಯಂದಿರು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದರು. ಮೇ 25ರಂದು ನನ್ನ ಮಗಳು ನನಗೆ ಕರೆ ಮಾಡಿ ಪತಿ ಹಾಗೂ ಅವರ ಸಂಬಂಧಿಕರು ಹಣಕ್ಕಾಗಿ ನನ್ನನ್ನು ಹಿಂಸಿಸುತ್ತಿದ್ದಾರೆ ಎಂದು ತಿಳಿಸಿದ್ದಳು. ಈ ಬಗ್ಗೆ ಮಾತನಾಡಲು ಗ್ರಾಮಕ್ಕೆ ತೆರಳಿ ತನ್ನ ಹೆಣ್ಣುಮಕ್ಕಳ ಬಗ್ಗೆ ವಿಚಾರಿಸಿದಾಗ ನನಗೂ ಕೂಡ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರಾಜಸ್ಥಾನದ ಮಹಿಳಾ ಕಾರ್ಯಕರ್ತರು ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ. ಈ ಸಹೋದರಿಯರು ಅನುಭವಿಸಿದ ನೋವನ್ನು ಅರ್ಥಮಾಡಿಕೊಳ್ಳಬೇಕು. ಇದು ಅತ್ಯಂತ ಘೋರ ಅಪರಾಧ, ಮಹಿಳೆಯರನ್ನು ಅಮಾನುಷವಾಗಿ ನಡೆಸಿಕೊಂಡಿರುವುದೇ ಈ ದುರಂತಕ್ಕೆ ಕಾರಣ ಎಂದು ಮಹಿಳಾ ಸಂಘಟನೆಗಳು ದೂರಿವೆ. ಘಟನೆಯ ಬಗ್ಗೆ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!