ಐವರು ಮೊಬೈಲ್ ಸುಲಿಗೆಕೋರರ ಬಂಧನ: ಲಕ್ಷಾಂತರ ಮೌಲ್ಯದ ವಸ್ತುಗಳ ವಶ

ಹೊಸದಿಗಂತ ವರದಿ, ಕಲಬುರಗಿ:

ನಗರದ ಎಂ.ಬಿ.ನಗರ ಪೊಲೀಸ ಠಾಣೆಯ ಪೊಲೀಸರಿಂದ ಕುಖ್ಯಾತ 5 ಜನ ಮೊಬೈಲ್ ಸುಲಿಗೆಕೋರರನ್ನು ಬಂಧಿಸಿ,ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳಾದ ಸೈಯದ ಮುದಶಿರ ಸೈಯದ ಜಬ್ಬಾರ, ಸಮೀರ ಅಲಿಯಾಸ್ ಬಾಬಾ ರಾಜಾ ಪಟೇಲ, ಅಬ್ದುಲ್ ಮೋಗನಿ ಮಹ್ಮದ ಮಹೀಮೂದ ಸಾಬ, ಮಹ್ಮದ ಮುಬಿನ ಅಲಿಯಾಸ್ ಅಬ್ದುಲ್ ರಹಮಾನ್ ಖಾಲೀದ್ ಜಮಾದ, ಸೈಯದ್ ಜಾಫರ ಹುಸೇನಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ.

ಬಂಧಿತರಿಂದ 43 ವಿವಿಧ ಕಂಪನಿಯ ಮೋಬೈಲ ಅಂದಾಜು 3,00,000, ಹಾಗೂ ಕೃತ್ಯಕ್ಕೆ ಬಳಸಿದ್ದ 4 ಮೋಟಾರ ಸೈಕಲ್ ಅಂದಾಜು ಮೊತ್ತ 2,00,000, ಹೀಗೆ ಒಟ್ಟು 5,00,000 ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಲಬುರಗಿ ನಗರ ಪೋಲಿಸ್ ಆಯುಕ್ತ ವೈ.ಎಸ್.ರವಿಕುಮಾರ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!