ಜಲಜೀವನ್​ ಮಿಷನ್​ಗೆ ಕೊಡುಗೆ ನೀಡಿದ ಐವರು ಯೋಧರಿಗೆ ಗಣರಾಜ್ಯೋತ್ಸವಕ್ಕೆ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

76 ನೇ ಗಣರಾಜ್ಯೋತ್ಸವಕ್ಕೆ ಮುಂಚಿತವಾಗಿ ಜಲ ಜೀವನ ಮಿಷನ್‌ಗೆ ನೀಡಿದ ಕೊಡುಗೆಗಳಿಗಾಗಿ ಕರ್ನಾಟಕದ ಐದು ಅಸಾಧಾರಣ ಜಲ ಯೋಧರನ್ನು ಆಯ್ಕೆ ಮಾಡಲಾಗಿದೆ.

ದೇಶದಾದ್ಯಂತ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಿರುವ ಈ ಮಿಷನ್ ಮೂಲಕ ನೀರಿನ ಹರಿವು ಹೆಚ್ಚಿಸುವಲ್ಲಿ ಮತ್ತು ಗ್ರಾಮೀಣ ಸಮುದಾಯಗಳ ಜೀವನವನ್ನು ಸುಧಾರಿಸುವಲ್ಲಿ ಈ ಯೋಧರು ಮಾಡಿದ ಅವಿರತ ಪ್ರಯತ್ನಗಳಿಗಾಗಿ ಈ ಜಲ ಯೋಧರನ್ನು ಆಯ್ಕೆ ಮಾಡಲಾಗಿದೆ.

ಜನವರಿ 26ಕ್ಕೆ ಮುಂಚಿತವಾಗಿ ಕರ್ನಾಟಕದ ಈ ಐದು ಅಸಾಧಾರಣ ವ್ಯಕ್ತಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಅವರನ್ನು ಭೇಟಿಯಾಗಲಿದ್ದಾರೆ.

ಉಡುಪಿ ಜಿಲ್ಲೆಯ ಬಡಗಬೆಟ್ಟು ಗ್ರಾಮದ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಕೋಟ್ಯಾನ್, ಕಲಬುರಗಿಯ ಗಂಜಲಖೇಡ ಗ್ರಾಮದ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಪಾಟೀಲ್, ಚಿತ್ರದುರ್ಗದ ಕೆರೆ ಕೊಂಡಾಪುರದ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ (ವಿಡಬ್ಲ್ಯೂಎಸ್‌ಸಿ) ಅಧ್ಯಕ್ಷೆ ಅನಂತಮ್ಮ ಹಾಗೂ ಕೊಪ್ಪಳ ತಾಲ್ಲೂಕಿನ ಕೋಳೂರು ಗ್ರಾಮದ ಶಿವಮ್ಮ ಮತ್ತು ಬಾಗಲಕೋಟೆಯ ಹಲಗಲಿಯ ವಿಡಬ್ಲ್ಯೂಎಸ್‌ಸಿ ಅಧ್ಯಕ್ಷ ವಿರಪ್ಪ ರಾಮಪ್ಪ ಚಿಕ್ಕೂರು ಅವರಿಗೆ ಗಣರಾಜ್ಯೋತ್ಸವ ಸಮಾರಂಭಕ್ಕೆ ಆಹ್ವಾನ ನೀಡಲಾಗಿದ್ದು, ರಾಷ್ಟ್ರಪತಿಗಳನ್ನು ಭೇಟಿ ಮಾಡಲಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!