Wednesday, June 29, 2022

Latest Posts

ರಾಜ್ಯಸಭೆಗೆ ಪಂಜಾಬ್​ನಿಂದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸಹಿತ ಐವರ ನಾಮ ನಿರ್ದೇಶನ

ಹೊಸದಿಗಂತ ಡಿಜಿಟಲ್ ಡೆಸ್ಕ್

ಆಮ್​ ಆದ್ಮಿ ಪಕ್ಷವು ಮುಂಬರುವ ರಾಜ್ಯಸಭಾ ಚುನಾವಣೆಗೆ ಪಂಜಾಬಿನಿಂದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್​ ಸೇರಿ ಐವರನ್ನು ನಾಮನಿರ್ದೇಶನ ಮಾಡಲು ಉದ್ದೇಶಿಸಿದೆ.
ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 92 ಸ್ಥಾನಗಳಲ್ಲಿ ಆಪ್ ಗೆಲುವು ಸಾಧಿಸುವುದರೊಂದಿಗೆ ಮೊದಲ ಬಾರಿಗೆ ಪಂಜಾಬಿನಲ್ಲಿ ಅಧಿಕಾರಕ್ಕೆ ಬಂದಿದೆ.ಇದೀಗ ಪಂಜಾಬ್​ನ ಐದು ರಾಜ್ಯಸಭೆ ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.
ಪಂಜಾಬ್‌ನಿಂದ ಕ್ರಿಕೆಟಿಗ ಹರ್ಭಜನ್ ಸಿಂಗ್, ದೆಹಲಿ ಶಾಸಕ ರಾಘವ್ ಚಡ್ಡಾ ಮತ್ತು ಡಾ.ಸಂದೀಪ್ ಪಾಠಕ್, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಕುಲಪತಿ ಅಶೋಕ್ ಮಿತ್ತಲ್ ಹಾಗೂ ಸಂಜೀವ್ ಅರೋರಾ ಅವರನ್ನು ನಾಮನಿರ್ದೇಶನ ಮಾಡಲು ಆಮ್ ಆದ್ಮಿ ಪಕ್ಷ ತೀರ್ಮಾನಿಸಿದೆ.
ಪಂಜಾಬ್​ನಿಂದ ಆಯ್ಕೆಯಾಗಿರುವ ಕಾಂಗ್ರೆಸ್​ನ ರಾಜ್ಯಸಭಾ ಸದಸ್ಯರಾದ ಪ್ರತಾಪ್​ ಸಿಂಗ್​ ಬಜ್ವಾ ಮತ್ತು ಸಮ್ಶೇರ ಸಿಂಗ್​ ದುಲ್ಲೋ, ಶಿರೋಮಣಿ ಅಕಾಲಿ ದಳದ ಸದಸ್ಯರಾದ ಸುಖ್​ದೇವ್​ ಸಿಂಗ್​ ಧಿಂಡ್ಸಾ ಮತ್ತು ನರೇಶ್ ಗುಜ್ರಾಲ್ ಹಾಗೂ ಬಿಜೆಪಿಯ ಶ್ವೈತ್ ಮಲಿಕ್ ನಿವೃತ್ತಿ ಹೊಂದುತ್ತಿದ್ದಾರೆ. ಈ ಸ್ಥಾನಗಳಿಗೆ ಆಪ್ ತನ್ನ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss