Monday, December 11, 2023

Latest Posts

ಹೈದರಾಬಾದ್‌ನಲ್ಲಿ ಮತ್ತೊಂದು ದುರಂತ, ಬಾಲಕಿ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೈದರಾಬಾದ್‌ನಲ್ಲಿ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಒಂದಾದ ಮೇಲೊಂದರಂತೆ ಬೆಳಕಿಗೆ ಬರುತ್ತಿವೆ. ಸುಳ್ಳು ಹೇಳಿ, ನಂಬಿಸಿ, ಕಿಡ್ನ್ಯಾಪ್‌ ಹೀಗೆ ಯಾವುದಾರೊಂದು ನೆಪದಲ್ಲಿ ಅಪ್ರಾಪ್ತ ಬಾಲಕಿಯರು ಮೇಲೆ ಅತ್ಯಾಚಾರ ಕೇಸ್‌ಗಳು ಹೆಚ್ಚಾಗುತ್ತಿವೆ. ಜೂಬ್ಲಿ ಹಿಲ್ಸ್ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ, ಪಾತಬಸ್ತಯಲ್ಲಿ ನಡೆದ ಲೈಂಗಿಕ ದೌರ್ಜನ್ಯ, ನೆಕ್ಲೇಸ್ ರೋಡ್ ಘಟನೆಗಳು ಮಾಸುವ ಮುನ್ನವೇ ನಗರದಲ್ಲಿ ಮತ್ತೊಬ್ಬ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.

ಸಿಕಂದರಾಬಾದ್‌ನ ವರ್ಕ್‌ಶಾಪ್‌ನಲ್ಲಿ ಐವರು ಯುವಕರು ಎರಡು ತಿಂಗಳಿಂದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಧೀರಜ್ ಮತ್ತು ರಿತೇಶ್ ಎಂಬ ಇಬ್ಬರು ಯುವಕರು ಹುಡುಗಿಯೊಬ್ಬಳ ಪರಿಚಯ ಮಾಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಬಾಲಕಿಯನ್ನು ಹೋಟೆಲ್‌ಗೆ ಕರೆತಂದು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುತ್ತಿರುವುದನ್ನು ವಿಡಿಯೋ ಮಾಡಿದ್ದಾನೆ.

ವಿಡಿಯೋಗಳನ್ನು ನೀಡುವುದಾಗಿ ಧೀರಜ್ ಬಾಲಕಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಸ್ನೇಹಿತರ ಜೊತೆ ಸೇರಿ ಮತ್ತೆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರಕ್ಕೆ ಒಳಗಾಗಿ ಎರಡು ತಿಂಗಳಾದರೂ ಸಂತ್ರಸ್ತೆ ಬಾಯಿ ಬಿಟ್ಟಿಲ್ಲ. ಕೊನೆಗೆ  ಮನೋವೈದ್ಯರ ಮುಂದೆ ಬಾಲಕಿ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಹೇಳಿಕೊಂಡಿದ್ದಾಲೆ. ಕೂಡಲೇ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಇಬ್ಬರು ಅಪ್ರಾಪ್ತರು ಸೇರಿದಂತೆ ಐವರನ್ನು ಕಾರ್ಖಾನಾ ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!