ಸ್ವಲ್ಪದರಲ್ಲಿ ತಪ್ಪಿದ ಹೆಲಿಕಾಪ್ಟರ್ ಅಪಘಾತ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಾರ್‌ಧಾಮ್‌ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ತಂಬಿ ಏವಿಯೇಷನ್‌ಗೆ ಸೇರಿದ ಬೆಲ್ 407 ಹೆಲಿಕಾಪ್ಟರ್ ಕೇದಾರನಾಥದಲ್ಲಿ ಲ್ಯಾಂಡ್‌ ಆಗುವಾಗ ಆಯತಪ್ಪಿದೆ. ಅಪಘಾತಕ್ಕೀಡಾಗಬೇಕಿದ್ದ ಹೆಲಿಕಾಪ್ಟರ್ ಸ್ವಲ್ಪದರಲ್ಲೇ ಪಾರಾಗಿದೆ. ಪೈಲಟ್ ಚಾಕಚಕ್ಯತೆಯಿಂದ ವರ್ತಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮೇ 31 ರಂದು ಮಧ್ಯಾಹ್ನ 1-30ಕ್ಕೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಗಳು ಘಟನೆಯ ಕುರಿತು ಪ್ರತಿಕ್ರಿಯಿಸಿದ್ದಾರೆ.

ಎನ್‌ಒಸಿ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಖಾಸಗಿ ಹೆಲಿಕಾಪ್ಟರ್ ಆಪರೇಟರ್‌ಗಳಿಗೆ ಸೂಚನೆ ನೀಡಿದೆ. ಪ್ರಯಾಣಿಕರ ಸುರಕ್ಷತೆಗಾಗಿ ದಿಢೀರ್ ತಪಾಸಣೆ ನಡೆಸಲು ಡಿಜಿಸಿಎ ಕೂಡ ನಿರ್ಧರಿಸಿದೆ. ಹವಾಮಾನವು ಅನುಕೂಲಕರವಾಗಿಲ್ಲದಿದ್ದರೆ ಹಿಂತಿರುಗುವಂತೆ ಡಿಜಿಸಿಎ ಅವರಿಗೆ ಸಲಹೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!