ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಜಿಲ್ಲೆಯ ಪ್ರಸಿದ್ಧ ದೇವಾಲಯ ಹಾಸನಾಂಬೆ ತಾಯಿಯ ಬಾಗಿಲು ತೆರೆಯೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್.24ರಂದು ಮಧ್ಯಾಹ್ನ 12ಗಂಟೆಗೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಅವರು, ಹಾಸನಾಂಬ ದೇವಾಲಯವು ಅಕ್ಟೋಬರ್.24ರಂದು ಮಧ್ಯಾಹ್ನ 12 ಗಂಟೆಗೆ ಬಾಗಿಲು ತೆರೆಯಲಿದೆ. ಆದರೇ ಮೊದಲ ದಿನವಾದ ಅಂದು ಭಕ್ತರಿಗೆ ಹಾಸನಾಂಬ ದರುಶನಕ್ಕೆ ಅವಕಾಶವಿಲ್ಲ ಎಂದರು.
ಮೊದಲ ಮತ್ತು ಕೊನೆಯ ದಿನದಂದು ಹಾಸನಾಂಬ ದೇವಿಯ ದರುಶನಕ್ಕೆ ಭಕ್ತರಿಗೆ ಅವಕಾಶವಿರುವುದಿಲ್ಲ. ಅಕ್ಟೋಬರ್ 25 ರಿಂದ 11 ದಿನಗಳ ಕಾಲ ಭಕ್ತರಿಗೆ ದರುಶನಕ್ಕೆ ಅವಕಾಶ ನೀಡಲಾಗುತ್ತಿದೆ. ದೇವಿಯ ದರುಶನಕ್ಕೆ ಟಿಕೆಟ್ ಖರೀದಿಸಿಯೂ ಭಕ್ತರು ದರುಶನ ಮಾಡಬಹುದಾಗಿದೆ. 1000 ಹಾಗೂ 300 ರೂ ಟಿಕೆಟ್ ಖರೀದಿಸಿದವರಿಗೆ ಒಂದೊಂದು ಲಾಡು, ಪ್ರಸಾದವನ್ನು ವಿತರಿಸುವುದಾಗಿ ತಿಳಿಸಿದರು.
ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೆ ಎಸ್ ಆರ್ ಟಿಸಿಯಿಂದ ಟೂರ್ ಪ್ಯಾಕೇಜ್ ಕೂಡ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.