Wednesday, November 29, 2023

Latest Posts

ಮೈಸೂರಿನಿಂದ ಬೆಂಗಳೂರು, ಕೊಚ್ಚಿ, ಹುಬ್ಬಳ್ಳಿ, ಗೋವಾಕ್ಕೆ ವಿಮಾನಗಳ ಹಾರಾಟ ರದ್ದು

ಹೊಸ ದಿಗಂತ ವರದಿ, ಮೈಸೂರು:

ಅರಮನೆ ನಗರಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿವಿಧೆಡೆಗೆ ಹೋಗಿ ಬರುತ್ತಿದ್ದ 4 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.

ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ನೀಡಲಾಗುತ್ತಿದ್ದ ಸಬ್ಸಿಡಿ ಸ್ಥಗಿತಗೊಂಡಿದೆ. ಏರ್‌ಕ್ರಾಫ್ಟ್ಗಳ ಸಂಖ್ಯೆ ಇಳಿಮುಖವಾಗಿದೆ. ಹಾಗೂ ತಾಂತ್ರಿಕ ಕಾರಣಗಳಿಂದ ಮೈಸೂರಿನಿಂದ 4 ವಿಮಾನಯಾನ ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಬಿ.ಆರ್.ಅನೂಪ್ ತಿಳಿಸಿದರು.

ಸದ್ಯ ಮೈಸೂರು ನಿಲ್ದಾಣ ಹೈದರಾಬಾದ್, ಚೆನ್ನೈ ಮಾರ್ಗಗಳಿಗೆ ಸೇವೆ ನೀಡುತ್ತಿದ್ದು, ಬೆಂಗಳೂರು, ಕೊಚ್ಚಿ, ಹುಬ್ಬಳ್ಳಿ ಗೋವಾ ಮಾರ್ಗಗಳು ರದ್ದಾಗಿವೆ. ಕೇಂದ್ರ ಸರ್ಕಾರ ಮತ್ತೆ ಸಬ್ಸಿಡಿ ನೀಡಿದರೆ ಈ ಮಾರ್ಗಗಳಿಗೆ ಮತ್ತೆ ವಿಮಾನ ಹಾರಾಟದ ಸೇವೆ ಆರಂಭವಾಗಲಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!