ಚೀನಾದಲ್ಲಿ ಪ್ರವಾಹ: 12 ಮಂದಿ ಸಾವು, ಸಾವಿರಾರು ಜನರ ಸ್ಥಳಾಂತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನೈಋತ್ಯ ಮತ್ತು ವಾಯುವ್ಯ ಚೀನಾದಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹವುಂಟಾಗಿದ್ದು, ಪ್ರವಾಹದ ಭೀಕರತೆಗೆ 12 ಜನ ಬಲಿಯಾಗಿದ್ದಾರೆ ಮತ್ತು ಸಾವಿರಾರುಜನ ಬಾಧಿತರಾಗಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ನೈಋತ್ಯ ಪ್ರಾಂತ್ಯದ ಸಿಚುವಾನ್‌ನಲ್ಲಿ, ಧಾರಾಕಾರ ಮಳೆಯು ಹಠಾತ್ ಪ್ರವಾಹವನ್ನು ಉಂಟುಮಾಡಿದ್ದು ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ 12 ಮಂದಿ ಕಾಣೆಯಾಗಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ಹೇಳಿವೆ. ಸುಮಾರು 1,300 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.

ಏತನ್ಮಧ್ಯೆ, ಗನ್ಸುವಿನ ವಾಯುವ್ಯ ಪ್ರಾಂತ್ಯದ ಲಾಂಗ್ನಾನ್ ನಗರದಲ್ಲಿ ಇನ್ನೂ ಆರು ಸಾವುಗಳು ವರದಿಯಾಗಿವೆ ಮತ್ತು 3,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಗಳಾಗಿವೆ. ಒಂದೇ ದಿನದಲ್ಲಿ 98.9 ಮಿಲಿಮೀಟರ್‌ಗಳಷ್ಟು (3.9 ಇಂಚುಗಳು) ಮಳೆಯಾಗಿದ್ದು ಜುಲೈ ಸರಾಸರಿ ಮಳೆಗಿಂತ ಎರಡುಪಟ್ಟು ಹೆಚ್ಚಾಗಿದೆ.

ಪೂರ್ವ ಝೆಜಿಯಾಂಗ್ ಪ್ರಾಂತ್ಯ ಮತ್ತು ಶಾಂಘೈ ನಗರ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಶಾಖದ ಅಲೆಯ ನಡುವೆ ಮಳೆ ಸುರಿಯುತ್ತಿದೆ, ಕಳೆದ ವಾರ ತಾಪಮಾನವು 42 ಡಿಗ್ರಿ ಸೆಲ್ಸಿಯಸ್ (107 ಫ್ಯಾರನ್‌ಹೀಟ್) ವರೆಗೆ ಏರಿದೆ.

ಪ್ರಯಾಣವನ್ನು ನಿರ್ಬಂಧಿಸುವ ಮತ್ತು ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸುವ ಕಟ್ಟುನಿಟ್ಟಾದ “ಶೂನ್ಯ-COVID” ಕ್ರಮಗಳಿಂದ ಬಾಧಿತವಾಗಿರುವ ಚೀನಾದ ಆರ್ಥಿಕತೆಗೆ ಪ್ರವಾಹವು ಹೆಚ್ಚುವರಿ ಹೊಡೆತ ಕೊಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!