ಪಾಕ್ ಗೆ ಜಲಾಘಾತ: ಭಾರತದ ಪ್ರತಿಕಾರದ ರಣಬೇಟೆಗೆ ಪಾಕಿಸ್ತಾನ್ ಕಥೆ ಫಿನಿಶ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್‌ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನಕ್ಕೆ ಭಾರತ ತಿರುಗೇಟು ಕೊಟ್ಟಿದ್ದು, ಮೊದಲ ಕ್ರಮವಾಗಿ ಸಿಂಧೂ ನದಿ ನೀರಿನ ಒಪ್ಪಂದ ರದ್ದು ಮಾಡಿ, ನೀರು ಬಂದ್ ಮಾಡುವುದಾಗಿ ಭಾರತ ಹೇಳಿತ್ತು.

ಇದರ ಬೆನ್ನಲ್ಲೇ ಕೇಂದ್ರ ಗೃಹಸಚಿವ ಅಮಿತ್ ಶಾ, ಜಲಶಕ್ತಿ ಸಚಿವ ಸಿಆರ್ ಪಾಟೀಲ್, ವಿದೇಶಾಂಗ ಸಚಿವ ಜೈಶಂಕರ್ ನಡುವೆ ಮಹತ್ವದ ಸಭೆ ನಡೆದಿದೆ. ಈ ವೇಳೆ ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಬಿಡದಿರೋ ಬಗ್ಗೆ ಚರ್ಚೆ ನಡೆದಿದ್ದು, 3 ಹಂತದ ಯೋಜನೆಗೆ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.

ಸಭೆಯಲ್ಲಿ ಕೇಂದ್ರ ಸಚಿವರ ನಡುವೆ ಹಲವಾರು ಸಲಹೆಗಳ ಕುರಿತು ಚರ್ಚಿಸಲಾಗಿದ್ದು, ತನ್ನ ನಿರ್ಧಾರವನ್ನು ಜಾರಿಗೆ ತರುವ ಸಂದರ್ಭದಲ್ಲಿ ಕಾನೂನು ಸವಾಲುಗಳು ಸೇರಿದಂತೆ ಪ್ರತಿಯೊಂದು ಸವಾಲನ್ನು ಎದುರಿಸಲು ಭಾರತ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!