SHOCKING VIDEO| ಚಂಡಮಾರುತಕ್ಕೆ ಸಿಕ್ಕ ಐಷಾರಾಮಿ ಕ್ರೂಸ್‌ನ ಸ್ಥಿತಿ ಹೇಗಿತ್ತು ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕದ ಫ್ಲೋರಿಡಾ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತ ಅವಾಂತರ ಸೃಷ್ಟಿಸಿದೆ. ಫ್ಲೋರಿಡಾದ ಪೋರ್ಟ್ ಕೆನಾವೆರಲ್‌ನಲ್ಲಿ ಲಂಗರು ಹಾಕಿದ್ದ ರಾಯಲ್ ಕೆರಿಬಿಯನ್ ಕ್ರೂಸ್ ಚಂಡಮಾರುತಕ್ಕೆ ಸಿಕ್ಕಿ ತತ್ತರಿಸಿರುವ ವಿಡಿಯೋ ಹೊರಬಿದ್ದಿದೆ.

ಚಂಡಮಾರುತದಿಂದಾಗಿ ಹಡಗಿನ ಮೇಲೆ ಇರಿಸಲಾಗಿದ್ದ ಕುರ್ಚಿಗಳು, ಟೇಬಲ್, ದೊಡ್ಡ ಛತ್ರಿಗಳು ಮತ್ತು ಸಣ್ಣ ವಸ್ತುಗಳು ಹಾರಲು ಪ್ರಾರಂಭಿಸಿದವು. ಇವುಗಳಲ್ಲಿ ಕೆಲವು ಪ್ರಯಾಣಿಕರ ತಲೆಯ ಮೇಲೆ ಬಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಘಟನೆಯಲ್ಲಿ ಯಾರೂ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ.

ಜೂನ್‌ 24ರಂದು ನಡೆದಿರುವ ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಹಡಗಿನಿಂದ ಜನರ ಕೂಗಾಟ, ಬಲವಾದ ಗಾಳಿ, ಸಮುದ್ರ ಅಲೆಗಳ ಅಬ್ಬರವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!