ಹಾರಾಟಕ್ಕೆ ಸಿದ್ಧವಾದ ‘Fly91’ ವಿಮಾನ: ‘DGCA’ನಿಂದ ಸಿಕ್ಕಿತು ಏರ್ ಆಪರೇಟರ್ ಪ್ರಮಾಣಪತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಹೊಸ ವಿಮಾನಯಾನ ಸಂಸ್ಥೆ ‘Fly91’ ಗೆ ಡಿಜಿಸಿಎ ಏರ್ ಆಪರೇಟರ್ ಪ್ರಮಾಣಪತ್ರ ನೀಡಿದೆ.
ಉನ್ನತ ವಾಯುಯಾನ ಅನುಭವಿಗಳ ನೇತೃತ್ವ ವಹಿಸಿರುವ ಫ್ಲೈ 91 ‘ಭಾರತ್ ಅನ್ಬೌಂಡ್’ ಎಂಬ ಟ್ಯಾಗ್ಲೈನ್ ಹೊಂದಿದೆ.

ಕಿಂಗ್ ಫಿಶರ್ ಏರ್ ಲೈನ್ಸ್ ಹಿರಿಯ ಕಾರ್ಯನಿರ್ವಾಹಕ ಮನೋಜ್ ಚಾಕೊ ಸಹ-ಸ್ಥಾಪಿಸಿದ ‘ಜಸ್ಟ್ ಉಡೋ ಏವಿಯೇಷನ್ ಪ್ರೈವೇಟ್ ಲಿಮಿಟೆಡ್’ ಕಳೆದ ವರ್ಷ ಏಪ್ರಿಲ್ ನಲ್ಲಿ ‘Fly91′ ಬ್ರಾಂಡ್ ಹೆಸರಿನಲ್ಲಿ ವಿಮಾನಯಾನವನ್ನು ಪ್ರಾರಂಭಿಸಲು ನಾಗರಿಕ ವಿಮಾನಯಾನ ಸಚಿವಾಲಯದ ಅನುಮೋದನೆಯನ್ನು ಪಡೆಯಿತು.

ಜಿಎಂಆರ್ ನಿರ್ಮಿಸಿದ ಹೊಸ ಗೋವಾ ವಿಮಾನ ನಿಲ್ದಾಣವನ್ನ ವಿಮಾನಯಾನವು ತನ್ನ ಮುಖ್ಯ ನೆಲೆಯಾಗಿ ಹೊಂದಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!