ಹಾರುವ ಜೆಟ್‌ಪ್ಯಾಕ್‌, ರೋಬೋಟ್ಸ್‌, ಟೆಥರ್ಡ್‌ ಡ್ರೋನ್-‌ ಭಾರತೀಯ ಸೇನೆ ಆಧುನೀಕರಣ ಗೊಳ್ಳುತ್ತಿರೋದು ಹೀಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹೊಸ ಹೊಸ ಶಸ್ತ್ರಾಸ್ತ್ರಗಳನ್ನು ಅಳವಡಿಸಿಕೊಳ್ಳುತ್ತ ಬಲಿಷ್ಟವಾಗುತ್ತಿರೋ ಭಾರತೀಯ ಸೇನೆಯು ಈಗ ಭವಿಷ್ಯದಲ್ಲಿ ಸಂಭವಿಸಬಹುದಾದ ತಂತ್ರಜ್ಞಾನ ಯುದ್ಧಕ್ಕೆ ಸಜ್ಜಾಗುವತ್ತ ತೆರೆದುಕೊಂಡಿದ್ದು ಸೇನೆಯನ್ನು ಆಧುನೀಕರಣಗೊಳಿಸುವ ಭಾಗವಾಗಿ ಸೈನಿಕರಿಗೆ ಹಾರುವ ಜೆಟ್‌ಪ್ಯಾಕ್‌, ರೋಬೋಟಿಕ್‌ ಮ್ಯೂಲ್ಸ್‌ (ಹೇಸರಗತ್ತೆಯಂತಹ ರೋಬಾಟ್)‌ ಹಾಗು ಅತ್ಯಾಧುನಿಕ ಟೆಥರ್ಡ್‌ ಡ್ರೋನ್‌ ಗಳನ್ನು ಖರೀದಿಸಲು ಮುಂದಾಗಿದೆ.

ಜೆಟ್‌ ಪ್ಯಾಕ್‌ ಎಂಬುದು ಬೆನ್ನಿಗೆ ಹಾಕಿಕೊಳ್ಳುವ ಸಾಧನವಾಗಿದ್ದು ಸೈನಿಕರಿಗೆ ನೆಲದಿಂದ ಮೇಲೆ 50 ಕಿಲೋಮೀಟರ್‌ ವೇಗದಲ್ಲಿ ಹಾರಲು ಇದು ಸಹಾಯಕವಾಗಲಿದೆ. ಈ ಥರದ 48 ಜೆಟ್‌ ಪ್ಯಾಕ್‌ ಗಳನ್ನು ಖರೀದಿಸಲು ಸೇನೆಯು ಪ್ರಸ್ತಾವನೆ ಸಲ್ಲಿಸಿದ್ದು ನೆಲದಿಂದ ಎಲ್ಲಾ ಹವಾಮಾನಗಳಲ್ಲಿ 3000ಅಡಿ ಎತ್ತರಕ್ಕೆ ಹಾರಬಲ್ಲ ಹಾಗು 80 ಕೆಜಿಗಿಂತ ಹೆಚ್ಚಿನ ತೂಕ ಹೊತ್ತೊಯ್ಯಬಲ್ಲ ಜೆಟ್‌ ಪ್ಯಾಕ್‌ ಅನ್ನು ಖರೀದಿಸಲು ಪ್ರಸ್ತಾವನೆ ಸಲ್ಲಿಸಿದೆ.

ಇದರ ಜೊತೆ ರೋಬಾಟಿಕ್‌ ಹೇಸರಗತ್ತೆಗಳನ್ನು ಖರೀದಿಸಲೂ ಸೇನೆಯು ಚಿಂತನೆ ನಡೆಸಿದೆ. ಇವು 10,000 ಅಡಿ ಎತ್ತರದಲ್ಲಿಯೂ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿದ್ದು ಸರಕು ಸಾಗಣೆ ಅಗತ್ಯ ವಸ್ತುಗಳ ರವಾನೆಗೆ ಸಹಾಯಕವಾಗಲಿದ್ದು 100 ರೋಬಾಟಿಕ್‌ ಹೇಸರಗತ್ತೆಗಳನ್ನು ಪಡೆಯಲು ಚಿಂತಿಸಿದೆ. ಈ ರೋಬಾಟಿಕ್‌ ಹೇಸರಗತ್ತೆಗಳು ಸ್ವಯಂ ಚಾಲಿತವಾಗಿ ನಿರ್ದಿಷ್ಟ ಗುರಿ ತಲುಪಬಲ್ಲ ಸಾಮರ್ಥ್ಯವನ್ನು ಹೊಂದಿದ್ದು ಉಪಗ್ರಹ ನ್ಯಾವಿಗೇಷನ್‌ ವ್ಯವಸ್ಥೆಯ ಮೂಲಕ ಕಡಿಮೆ ಅಡಚಣೆಗಳಿರುವ ಪ್ರದೇಶದಲ್ಲಿ ಚಲಿಸಬಲ್ಲ ಸಾಮರ್ಥ್ಯ ಹೊಂದಿರುತ್ತವೆ.

ಇದಲ್ಲದೇ ಟೆಥರ್ಡ್‌ ಡ್ರೋನ್ಸ್‌ ಅಂದರೆ ನೆಲಕ್ಕೆ ಜೋಡಿಸಲ್ಪಟ್ಟ ಅತ್ಯಾಧುನಿಕ ಡ್ರೋನ್‌ ವ್ಯವಸ್ಥೆಯನ್ನೂ ಪಡೆಯಲು ಭಾರತೀಯ ಸೇನೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾದ ವರದಿಯೊಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!