ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ಉಸಿರಾಡುವ ಗಾಳಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಹೊಗೆಯಿಂದಾಗಿ ಗಾಳಿಯು ಮಲಿನವಾಗುತ್ತಿದೆ. ನಾವು ಪ್ರತಿ ವರ್ಷ ಹೋರಾಡುತ್ತಿರುವ ಸಮಸ್ಯೆಯಾಗಿದ್ದರೂ, AQI ಮಟ್ಟಗಳು ಪ್ರಸ್ತುತ ಆತಂಕಕಾರಿಯಾಗಿವೆ. ದೆಹಲಿಯ ಕೆಲವು ಭಾಗಗಳಲ್ಲಿ AQI 600 ಕ್ಕಿಂತ ಹೆಚ್ಚಿದೆ. ಆರೋಗ್ಯ ತಜ್ಞರ ಪ್ರಕಾರ ಗಾಳಿಯ ಗುಣಮಟ್ಟ 700ಕ್ಕಿಂತ ಹೆಚ್ಚಿರುವ ಸ್ಥಳಗಳಿಗೆ ಹೋಗದಂತೆ ಸೂಚಿಸಲಾಗಿದೆ.
ಅಂತಹ ಸ್ಥಳಗಳಲ್ಲಿ ಇದ್ದರೆ ನೀವು ವಾಸಿಸುತ್ತಿದ್ದರೆ, ಮನೆಯಿಂದ ಹೊರಗೆ ಬರಬೇಡಿ ಎಂಬ ಸೂಚನೆ ಕೊಡುತ್ತಿದ್ದಾರೆ. ಆದರೆ ಜನರು ಕೆಲಸಕ್ಕಾಗಿ ತಮ್ಮ ಮನೆಯಿಂದ ಹೊರಗೆ ಹೋದಾಗ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಕೆಲವು ಸಲಹೆಗಳಿವೆ. ಈಗ ತಿಳಿದುಕೊಳ್ಳೋಣ…
- ಹೊರಗಡೆ ವ್ಯಾಯಾಮ, ವಾಕಿಂಗ್ ಮಾಡಬೇಡಿ
- ಪಾರ್ಕ್‌ಗಳಿಗೆ ತೆರಳಬೇಡಿ
- ಕರ್ಚೀಫ್ ಅಥವಾ ಮಾಸ್ಕ್ ಧರಿಸುವುದು ಕಡ್ಡಾಯ
- ಹೊರಗಡೆಯ ಆಹಾರ ಸೇವನೆಯನ್ನು ತಪ್ಪಿಸಿ
- ಕಲುಷಿತ ನೀರು ಕುಡಿಯಬೇಡಿ, ಧೂಮಪಾನ ಮಾಡಬೇಡಿ.
- ಕಾರು ಮತ್ತು ದ್ವಿಚಕ್ರ ಮಾಲಿನ್ಯವನ್ನು ಪರಿಶೀಲಿಸಬೇಕು.
- ನಿಮ್ಮ ಮನೆಯಲ್ಲಿ ಗ್ಯಾಸ್ ಸ್ಟೌವ್ ಅನ್ನು ನಿಯಮಿತವಾಗಿ ಪರಿಶೀಲಿಸಬೇಕು ಮನೆಯಲ್ಲಿ ಸರಿಯಾದ ಗಾಳಿ ಇರುವಂತೆ ನೋಡಿಕೊಳ್ಳಬೇಕು.
- ಏರ್ ಫ್ರೆಶ್‌ನರ್‌ಗಳನ್ನು ಮಿತವಾಗಿ ಬಳಸಿ.
- ಪ್ರತಿ ವಾರ ಬೆಡ್‌ಶೀಟ್‌ಗಳನ್ನು ಬಿಸಿ ನೀರಿನಲ್ಲಿ ತೊಳೆಯಿರಿ.
- ಮನೆಯ ಸುತ್ತ ಆದಷ್ಟು ಗಿಡಗಳನ್ನು ನೆಡಿ