September 27, 2026
Sunday, September 27, 2026
spot_img

FOOD | 1 ಕಪ್ ಅವಲಕ್ಕಿ ಇದ್ರೆ ಸಾಕು.. ಟೀ ಜೊತೆ ಸವಿಯೋಕೆ ರೆಡಿ ಮಾಡ್ಬಹುದು ‘ಅವಲಕ್ಕಿ ಪಕೋಡ’

ಒಂದು ಕಡೆ ಜೋರು ಮಳೆ ಮತ್ತೊಂದು ಕಡೆ ಅಮ್ಮ ಬಿಸಿಬಿಸಿಯಾಗಿ ಟೀ ತಂದು ಟೇಬಲ್ ಮೇಲೆ ಇಟ್ಟಿದ್ದಾಳೆ. ವಾತಾವರಣನು ತಂಪಾಗಿದೆ. ಈ ಕೂಲ್ ವೆದರ್ ನಲ್ಲಿ ಬರೀ ಟೀ ಕುಡಿದ್ರೆ ಏನ್ ಚಂದ ಅಲ್ವಾ? ಅದಿಕ್ಕೆ ಇವತ್ತು ಸಕ್ಕತ್ ಟೇಸ್ಟಿ ಆಗಿರೋ ಅವಲಕ್ಕಿ ಪಕೋಡ ಮಾಡೋಣ. ರೆಸಿಪಿ ತುಂಬಾ ಸಿಂಪಲ್ ..

ಬೇಕಾಗುವ ಪದಾರ್ಥಗಳು

ದಪ್ಪ ಅವಲಕ್ಕಿ 1 ಕಪ್, ಕಡಲೆಹಿಟ್ಟು ಅರ್ಧ ಕಪ್, 1 ಈರುಳ್ಳಿ, 2 ಹಸಿಮೆಣಸು, ಸ್ವಲ್ಪ ಕರಿಬೇವು, ಅರ್ಧ ಚಮಚ ಜೀರಿಗೆ, ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಯಲು ಎಣ್ಣೆ.

ಮಾಡುವ ವಿಧಾನ

ಮೊದಲಿಗೆ ಅವಲಕ್ಕಿಯನ್ನ ತೊಳೆದು ನೀರು ಸೋಸಿ ಐದು ನಿಮಿಷ ಹಾಗೆ ಇಡಿ.

ಈಗ ಅದಕ್ಕೆ ಈರುಳ್ಳಿ ಹಸಿಮೆಣಸಿನಕಾಯಿ ಕರಿಬೇವು ಕಡ್ಲೆಹಿಟ್ಟು ಜೀರಿಗೆ, ಅರಿಶಿನ ಮತ್ತು ಉಪ್ಪು, ಹಾಕಿ ಗಟ್ಟಿಯಾಗಿ ಸರಿಯಾದ ಹದಕ್ಕೆ ಬರುವ ಹಾಗೆ ಕಲಸಿ. ನೀರು ಬೇಕಿದ್ದರೆ ಸೇರಿಸಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಆದ್ಮೇಲೆ ಈ ಮಿಶ್ರಣದ ಚಿಕ್ಕ ಚಿಕ್ಕ ಉಂಡೆಗಳನ್ನು ಹಾಕಿ ಮೀಡಿಯಂ ಹೀಟ್ ನಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿದ್ರೆ ಗರಿಗರಿಯಾದ ಅವಲಕ್ಕಿ ಪಕೋಡ ರೆಡಿ.

Must Read