October 16, 2026
Friday, October 16, 2026
spot_img

FOOD | ಸ್ವಲ್ಪ ಖಾರ ಸ್ವಲ್ಪ ಸಿಹಿ ಈ ರೆಸ್ಟೋರೆಂಟ್ ಸ್ಟೈಲ್ ಹನಿ ಚಿಕನ್!

ಸಿಹಿ ಮತ್ತು ಖಾರದ ರುಚಿಯ ಅದ್ಭುತ ಮಿಶ್ರಣವೇ ಹನಿ ಚಿಕನ್. ಜೇನುತುಪ್ಪದ ಸಿಹಿ, ಸೋಯಾ ಸಾಸ್‌ನ ಫ್ಲೇವರ್ ಮತ್ತು ಮಸಾಲೆಯ ರುಚಿ ಸೇರಿ ಈ ಡಿಶ್‌ಗೆ ಸ್ಪೆಷಲ್ ಟಚ್ ನೀಡುತ್ತದೆ. ಸಂಜೆ ಸ್ನ್ಯಾಕ್ ಆಗಿಯೂ, ಫ್ರೈಡ್ ರೈಸ್ ಅಥವಾ ನೂಡಲ್ಸ್ ಜೊತೆ ಸೈಡ್ ಡಿಶ್ ಆಗಿಯೂ ಇದನ್ನು ಸವಿಯಬಹುದು.

ಬೇಕಾಗುವ ಸಾಮಗ್ರಿಗಳು

ಚಿಕನ್ – 500 ಗ್ರಾಂ
ಜೇನುತುಪ್ಪ – 3 ರಿಂದ 4 ಚಮಚ
ಸೋಯಾ ಸಾಸ್ – 2 ಚಮಚ
ಕಾರ್ನ್ ಫ್ಲೋರ್ – 2 ಚಮಚ
ಮೊಟ್ಟೆ – 1
ಈರುಳ್ಳಿ – ಅರ್ಧ ಕಪ್
ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹಸಿಮೆಣಸಿನಕಾಯಿ – 2
ಕಾಳುಮೆಣಸಿನ ಪುಡಿ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ

ಮೊದಲು ಒಂದು ಬೌಲ್‌ನಲ್ಲಿ ಚಿಕನ್ ತೆಗೆದು ಅದಕ್ಕೆ ಸ್ವಲ್ಪ ಸೋಯಾ ಸಾಸ್, ಕಾರ್ನ್ ಫ್ಲೋರ್, ಮೊಟ್ಟೆ, ಉಪ್ಪು ಮತ್ತು ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು 15 ನಿಮಿಷ ಮೆರಿನೇಟ್ ಆಗಲು ಬಿಡಿ.

ನಂತರ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಚಿಕನ್ ತುಂಡುಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ ಪಕ್ಕಕ್ಕೆ ಇಡಿ.

ಮತ್ತೊಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ. ಈಗ ಜೇನುತುಪ್ಪ ಮತ್ತು ಉಳಿದ ಸೋಯಾ ಸಾಸ್ ಸೇರಿಸಿ ಕಡಿಮೆ ಉರಿಯಲ್ಲಿ ಕುದಿಸಿ.

ಕೊನೆಯಲ್ಲಿ ಫ್ರೈ ಮಾಡಿದ ಚಿಕನ್ ಸೇರಿಸಿ ಸಾಸ್ ಚೆನ್ನಾಗಿ ಹಚ್ಚಿಕೊಳ್ಳುವಂತೆ ಟಾಸ್ ಮಾಡಿ. ಚಿಕನ್ ಸ್ಟಿಕ್ಕಿ ಟೆಕ್ಸ್ಚರ್ ಬಂದರೆ ರುಚಿಕರವಾದ ಹನಿ ಚಿಕನ್ ಸವಿಯಲು ರೆಡಿ!

Must Read