June 11, 2026
Thursday, June 11, 2026
spot_img

FOOD | ಚಪಾತಿ, ರೋಟಿಗೆ ಬೆಸ್ಟ್ ಕಾಂಬಿನೇಷನ್: ಕೇವಲ 15 ನಿಮಿಷದಲ್ಲಿ ಮಾಡಿ ಸೂಪರ್‌ ಟೇಸ್ಟಿ ಪನೀರ್ ಬಟರ್ ಮಸಾಲಾ

ಮನೆಯಲ್ಲಿಯೇ ಹೋಟೆಲ್ ರುಚಿಯ ಅಡುಗೆ ಮಾಡಬೇಕೆನಿಸಿದಾಗ ನೆನಪಿಗೆ ಬರುವ ಮೊದಲ ಆಯ್ಕೆ ‘ಪನೀರ್ ಬಟರ್ ಮಸಾಲಾ’. ಈ ರೆಸಿಪಿ ಚಪಾತಿ, ರೋಟಿ ಮತ್ತು ಪಲಾವ್‌ಗೆ ಸೂಪರ್ ಕಾಂಬಿನೇಷನ್.

ಬೇಕಾಗುವ ಸಾಮಗ್ರಿಗಳು:
ಪನೀರ್
ಈರುಳ್ಳಿ
ಟೊಮೆಟೊ
ಗೋಡಂಬಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಬೆಣ್ಣೆ
ಫ್ರೆಶ್ ಕ್ರೀಮ್
ಖಾರದ ಪುಡಿ
ಅರಿಶಿನ ಪುಡಿ
ಗರಂ ಮಸಾಲಾ
ಕಸ್ತೂರಿ ಮೇತಿ
ಪಲಾವ್ ಎಲೆ
ಚಕ್ಕೆ ಮತ್ತು ಏಲಕ್ಕಿ
ಉಪ್ಪು ಮತ್ತು ಸಕ್ಕರೆ

ಮಾಡುವ ವಿಧಾನ:
ಮೊದಲು ಒಂದು ಬಾಣಲೆಯಲ್ಲಿ1 ಚಮಚ ಎಣ್ಣೆ ಮತ್ತು 1 ಚಮಚ ಬೆಣ್ಣೆ ಬಿಸಿ ಮಾಡಿ. ಅದಕ್ಕೆ ಎಲ್ಲಾ ಮಸಾಲೆಗಳು, ಈರುಳ್ಳಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮೃದುವಾಗುವವರೆಗೆ ಹುರಿಯಬೇಕು. ನಂತರ ಟೊಮೆಟೊ ಮತ್ತು ಗೋಡಂಬಿ ಸೇರಿಸಿ ಟೊಮೆಟೊ ಪೂರ್ತಿ ಮೆತ್ತಗಾಗುವವರೆಗೆ ಬೇಯಿಸಬೇಕು. ಈ ಮಿಶ್ರಣ ಸಂಪೂರ್ಣ ತಣ್ಣಗಾದ ನಂತರ ಪಲಾವ್ ಎಲೆಯನ್ನು ತೆಗೆದು, ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್ ಮಾಡಿಕೊಂಡು, ಅದೇ ಬಾಣಲೆಗೆ ಉಳಿದ ಬೆಣ್ಣೆ ಹಾಕಿ ಸಣ್ಣ ಉರಿಯಲ್ಲಿ ಖಾರದ ಪುಡಿ ಹಾಕಿ, ರುಬ್ಬಿದ ಪೇಸ್ಟ್ ಅನ್ನು ಸುರಿದು ಮಿಕ್ಸ್ ಮಾಡಬೇಕು. ಮಿಶ್ರಣದಿಂದ ಎಣ್ಣೆ ಬಿಡುವವರೆಗೆ 5 ನಿಮಿಷ ಬೇಯಿಸಿ.

ನಂತರ ಉಪ್ಪು, ಒಂದು ಚಿಟಿಕೆ ಸಕ್ಕರೆ, ಅರಿಶಿನ ಮತ್ತು ಗರಂ ಮಸಾಲಾ ಸೇರಿಸಿ. ಗ್ರೇವಿ ಹದಕ್ಕೆ ತರಲು ಅರ್ಧ ಕಪ್ ನೀರು ಹಾಕಿ. ಈಗ ಪನೀರ್ ಕ್ಯೂಬ್ಸ್‌ಗಳನ್ನು ಗ್ರೇವಿಗೆ ಸೇರಿಸಿ, ಮಸಾಲೆ ಎಲ್ಲಾ ಪನೀರ್‌ಗೆ ಹಿಡಿಯಲು ಸಣ್ಣ ಉರಿಯಲ್ಲಿ 3-4 ನಿಮಿಷ ಬೇಯಲು ಬಿಡಬೇಕು. ನಂತರ ಕೈಯಿಂದ ಕಸ್ತೂರಿ ಮೇತಿಯನ್ನು ಪುಡಿ ಮಾಡಿ ಮೇಲೆ ಉದುರಿಸಿ. ಕೊನೆಯದಾಗಿ ಫ್ರೆಶ್ ಕ್ರೀಮ್ ಸೇರಿಸಿ ಚೆನ್ನಾಗಿ ಕೈಯಾಡಿಸಿದರೆ ‘ಪನೀರ್ ಬಟರ್ ಮಸಾಲಾ’ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !