ವಯಸ್ಸು ಹೆಚ್ಚಾದಂತೆ ಗಡ್ಡ, ತಲೆ ಕೂದಲು ಬೆಳ್ಳಗಾಗುವುದು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕವಯಸ್ಸಿನಲ್ಲಿಯೇ ತಲೆ ಕೂದಲು, ಗಡ್ಡ ಬೆಳ್ಳಗಾಗ್ತಿದೆ. ಅದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ ಇವತ್ತು ನಾವು ಯಾವುದೇ ಕೆಮಿಕಲ್ ಇಲ್ಲದೆ ಮನೆಯಲ್ಲೇ ನ್ಯಾಚುರಲ್ ಆಗಿ ಗಡ್ಡ ಹಾಗೂ ತಲೆ ಕೂದಲನ್ನು ಕಪ್ಪು ಮಾಡೋದು ಹೇಗೆ ಅಂತ ನೋಡೋಣ.
ಚಹಾ ಎಲೆ
1 ಕಪ್ ನೀರು ಮತ್ತು 1 ಚಮಚ ಚಹಾ ಎಲೆ ಪುಡಿಯನ್ನು ಹಾಕಿ 5 ನಿಮಿಷಗಳ ಕಾಲ ಕುದಿಸಿದ ನಂತರ ತಣ್ಣಗಾಗಲು ಬಿಡಿ. ಇದನ್ನು ಒಂದು ಸ್ಪ್ರೇ ಬಾಟಲಿಯಲ್ಲಿ ಹಾಕಿ ಪ್ರತಿದಿನ ನಿಮ್ಮ ಗಡ್ಡಕ್ಕೆ ಹಾಗೂ ತಲೆ ಕೂದಲಿಗೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ತೊಳೆಯಿರಿ.
ಮೆಂತ್ಯೆ ಬೀಜ
2-3 ಚಮಚ ಮೆಂತ್ಯೆ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ, ನೆನೆಸಿದ ಬೀಜಗಳನ್ನು ನುಣ್ಣಗೆ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಗಡ್ಡ ಅಥವಾ ಬಿಳಿಯಾದ ತಲೆಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಈ ವಿಧಾನವನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಪ್ರಯತ್ನಿಸುವುದರಿಂದ, ನಿಮ್ಮ ಕೂದಲು ಕಪ್ಪಾಗುತ್ತದೆ.
ನೆಲ್ಲಿಕಾಯಿ ಮತ್ತು ತೆಂಗಿನ ಎಣ್ಣೆ
1 ಕಪ್ ತೆಂಗಿನ ಎಣ್ಣೆಯಲ್ಲಿ 1 ಟೀ ಚಮಚ ಆಮ್ಲಾ ರಸವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಗಡ್ಡಕ್ಕೆ ಹಾಗೂ ತಲೆ ಕೂದಲಿಗೆ ಮಸಾಜ್ ಮಾಡಿ ನಂತರ 3-4 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಬಿಡಿ. ಬೆಳಿಗ್ಗೆ ಇದನ್ನು ತೊಳೆಯಿರಿ. ಇದರ ನಿಯಮಿತ ಬಳಕೆಯಿಂದ ಕೂದಲು ನೈಸರ್ಗಿಕ ಕಪ್ಪು ಬಣ್ಣವನ್ನು ಪುನಃಸ್ಥಾಪಿಸಬಹುದು.
ತೆಂಗಿನ ಎಣ್ಣೆ ಮತ್ತು ಬೇವಿನ ಎಲೆ
2 ಕಪ್ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ 1 ಕಪ್ ಬೇವಿನ ಎಲೆಗಳನ್ನು ಸೇರಿಸಿ. ಈ ಮಿಶ್ರಣ ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಬಿಸಿ ಮಾಡಿ. ಎಣ್ಣೆ ಕಪ್ಪು ಬಣ್ಣಕ್ಕೆ ತಿರುಗಿದ ನಂತರ, ಅದನ್ನು ತಣ್ಣಗಾಗಿಸಿ ನಂತರ ನಿಮ್ಮ ಕೂದಲಿಗೆ ಪ್ರತಿದಿನ ಹಚ್ಚಿ.