September 8, 2026
Tuesday, September 8, 2026
spot_img

FOOD | 15 ನಿಮಿಷದಲ್ಲಿ ರೆಡಿಯಾಗುತ್ತೆ ರುಚಿಕರವಾದ ಪನೀರ್ ಸೂಪ್: ಒಮ್ಮೆ ಟ್ರೈ ಮಾಡಿ

ರಾತ್ರಿ ಊಟಕ್ಕೆ ಹೊಟ್ಟೆ ತುಂಬಿಸುವ ಹಾಗೂ ಪ್ರೋಟೀನ್‌ಯುಕ್ತ ಆಹಾರ ಬೇಕಂದ್ರೆ ಪನೀರ್ ಸೂಪ್ ಬೆಸ್ಟ್. ತರಕಾರಿಗಳು, ಪನೀರ್ ಹಾಗೂ ಮಸಾಲೆಗಳಿಂದ ತಯಾರಿಸುವ ಈ ಸೂಪ್ ರುಚಿಕರವಾಗಿರುವುದರ ಜೊತೆಗೆ ರಾತ್ರಿ ಊಟವನ್ನು ಹಗುರವಾಗಿಡಲು ಸಹಾಯ ಮಾಡುತ್ತದೆ.

ಬೇಕಾಗುವ ಪದಾರ್ಥಗಳು

ಪನೀರ್ – ½ ಕಪ್, ಸಣ್ಣ ತುಂಡುಗಳು
ಕ್ಯಾರೆಟ್ – ½ ಕಪ್, ಸಣ್ಣಗೆ ಹೆಚ್ಚಿದ್ದು
ಬೀನ್ಸ್ – ¼ ಕಪ್, ಹೆಚ್ಚಿದ್ದು
ಕ್ಯಾಪ್ಸಿಕಮ್ – ¼ ಕಪ್, ಹೆಚ್ಚಿದ್ದು
ಬೆಳ್ಳುಳ್ಳಿ – 2 ಎಸಳು, ಸಣ್ಣಗೆ ಹೆಚ್ಚಿದ್ದು
ಶುಂಠಿ – ½ ಇಂಚು, ತುರಿದದ್ದು
ನೀರು ಅಥವಾ ವೆಜಿಟೆಬಲ್ ಸ್ಟಾಕ್ – 2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ½ ಟೀ ಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ನೀರು ಅಥವಾ ವೆಜಿಟೆಬಲ್ ಸ್ಟಾಕ್ ಕುದಿಯಲು ಇಡಿ. ಅದಕ್ಕೆ ಹೆಚ್ಚಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಒಂದು ನಿಮಿಷ ಕುದಿಸಿ.

ನಂತರ ಕ್ಯಾರೆಟ್, ಬೀನ್ಸ್ ಮತ್ತು ಕ್ಯಾಪ್ಸಿಕಮ್ ಸೇರಿಸಿ ಮಧ್ಯಮ ಉರಿಯಲ್ಲಿ ಸುಮಾರು 8–10 ನಿಮಿಷ ಬೇಯಿಸಿ. ತರಕಾರಿಗಳು ಸಂಪೂರ್ಣ ಮೆತ್ತಗಾಗದೆ ಸ್ವಲ್ಪ ಕ್ರಂಚಿಯಾಗಿರುವಂತೆ ಬೇಯಿಸಿದರೆ ಸೂಪ್ ರುಚಿಯಾಗಿರುತ್ತದೆ.

ಈಗ ಪನೀರ್ ತುಂಡುಗಳನ್ನು ಸೇರಿಸಿ ಇನ್ನೂ 2–3 ನಿಮಿಷ ಕುದಿಸಿ. ಬಳಿಕ ಉಪ್ಪು ಮತ್ತು ಕರಿಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಪನೀರ್ ಹೆಚ್ಚು ಹೊತ್ತು ಕುದಿಸಿದರೆ ಗಟ್ಟಿಯಾಗಬಹುದು, ಆದ್ದರಿಂದ ಕೊನೆಯಲ್ಲಿ ಸೇರಿಸುವುದು ಉತ್ತಮ.

ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಬಿಸಿಯಾಗಿರುವಾಗಲೇ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !