April 18, 2026
Saturday, April 18, 2026
spot_img

FOOD | ತುಂಬಾನೇ ಸುಲಭವಾಗಿ ಕುಂಬಳಕಾಯಿ ಪಲ್ಯ ಮಾಡೋದು ಹೇಗೆ ಗೊತ್ತಾ?

ಕುಂಬಳಕಾಯಿ (Pumpkin) ಬಳಸಿಕೊಂಡು ಮಾಡುವ ಪಲ್ಯ ಕರ್ನಾಟಕದ ಮನೆಗಳಲ್ಲಿ ಬಹಳ ಜನಪ್ರಿಯವಾದ ಒಂದು ಸಾಂಪ್ರದಾಯಿಕ ಸೈಡ್ ಡಿಶ್. ಸಿಹಿ-ಖಾರ ರುಚಿಯೊಂದಿಗೆ ಈ ಪಲ್ಯ ಅನ್ನ, ಚಪಾತಿ ಜೊತೆ ತುಂಬಾ ಚೆನ್ನಾಗಿ ಹೊಂದುತ್ತದೆ. ಕಡಿಮೆ ಮಸಾಲೆಯಲ್ಲಿ ಸುಲಭವಾಗಿ ತಯಾರಾಗುವ ಈ ರೆಸಿಪಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಬೇಕಾಗುವ ಪದಾರ್ಥಗಳು:

ಕುಂಬಳಕಾಯಿ – 2 ಕಪ್
ಎಣ್ಣೆ – 2 ಚಮಚ
ಸಾಸಿವೆ – 1/2 ಚಮಚ
ಉದ್ದಿನ ಬೇಳೆ – 1 ಚಮಚ
ಕಡಲೆಬೇಳೆ – 1 ಚಮಚ
ಕರಿಬೇವು – ಕೆಲವು ಎಲೆಗಳು
ಹಸಿಮೆಣಸಿನಕಾಯಿ – 2 (ಚೀರಿದ)
ಅರಿಶಿನ – 1/4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ತುರಿದ ತೆಂಗಿನಕಾಯಿ – 2 ಚಮಚ
ಬೆಲ್ಲ – 1 ಚಿಕ್ಕ ತುಂಡು

ಮಾಡುವ ವಿಧಾನ:

ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.ಅದಕ್ಕೆ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ ಸೇರಿಸಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ.

ನಂತರ ಕರಿಬೇವು ಹಾಗೂ ಹಸಿಮೆಣಸಿನಕಾಯಿ ಸೇರಿಸಿ. ಈಗ ಕತ್ತರಿಸಿದ ಕುಂಬಳಕಾಯಿ ಹಾಕಿ ಚೆನ್ನಾಗಿ ಕಲಸಿ.
ಅರಿಶಿನ, ಉಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ಮುಚ್ಚಿಟ್ಟು ಬೇಯಲು ಬಿಡಿ. ಕುಂಬಳಕಾಯಿ ಮೃದುವಾದ ಬಳಿಕ ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಕೊನೆಯಲ್ಲಿ ತುರಿದ ತೆಂಗಿನಕಾಯಿ ಸೇರಿಸಿ ಕಲಸಿ, 2 ನಿಮಿಷ ಬೇಯಿಸಿ ಗ್ಯಾಸ್ ಆಫ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !